ಈಡನ್‌ ಗಾರ್ಡನ್ಸ್‌ನಲ್ಲಿಂದು ರಸೆಲ್‌ vs ರಬಾಡ ಫೈಟ್

By Web DeskFirst Published Apr 12, 2019, 1:27 PM IST
Highlights

KKR ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕದನಕ್ಕೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನ ಸಜ್ಜಾಗಿದೆ. ಡೆಲ್ಲಿ ವಿರುದ್ಧ ಕಳೆದ ಪಂದ್ಯದಲ್ಲಿ ಸೂಪರ್ ಓವರ್’ನಲ್ಲಿ ಮುಗ್ಗರಿಸಿದ್ದ ಕೆಕೆಆರ್ ಇದೀಗ ತಿರುಗೇಟು ನೀಡಲು ಸಜ್ಜಾಗಿದೆ. 

ಕೋಲ್ಕತಾ(ಏ.12): ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲ ಸುತ್ತಿನ ಮುಖಾಮುಖಿಯಲ್ಲಿ, ಸೂಪರ್‌ ಓವರ್‌ನಲ್ಲಿ ಸೋಲುಂಡಿದ್ದ ಕೋಲ್ಕತಾ ನೈಟ್‌ರೈಡ​ರ್ಸ್ ಶುಕ್ರವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾತರಿಸುತ್ತಿದೆ. ಸಿಕ್ಸರ್‌ ಮಷಿನ್‌ ಆ್ಯಂಡ್ರೆ ರಸೆಲ್‌ಗೆ ಮತ್ತೊಮ್ಮೆ ವೇಗಿ ಕಗಿಸೋ ರಬಾಡ ಎದುರಾಗಲಿದ್ದು, ಇವರಿಬ್ಬರ ನಡುವಿನ ಪೈಪೋಟಿ ಎಲ್ಲರ ಕುತೂಹಲ ಕೆರಳಿಸಿದೆ.

6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೆಕೆಆರ್‌, ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತದೆ. ತಂಡದ ಯಶಸ್ಸಿನಲ್ಲಿ ರಸೆಲ್‌ ಪಾತ್ರ ನಿರ್ಣಾಯಕವೆನಿಸಿದೆ. 5 ಇನ್ನಿಂಗ್ಸ್‌ಗಳಿಂಂದ 257 ರನ್‌ ಗಳಿಸಿರುವ ರಸೆಲ್‌, 150 ರನ್‌ಗಳನ್ನು ಸಿಕ್ಸರ್‌ನಿಂದಲೇ ಗಳಿಸಿದ್ದಾರೆ. ಮತ್ತೊಂದೆಡೆ ಡೆಲ್ಲಿ 6 ಪಂದ್ಯಗಳಿಂದ 6 ಅಂಕ ಗಳಿಸಿದ್ದು, ಈ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದೆ ಶ್ರೇಯಸ್ ಅಯ್ಯರ್ ಪಡೆ. 

ಪಿಚ್‌ ರಿಪೋರ್ಟ್‌

ಕೋಲ್ಕತಾ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಇಲ್ಲಿ ಈ ವರ್ಷ ನಡೆದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಸ್ಪಿನ್ನ​ರ್ಸ್ ಪಾತ್ರ ಪ್ರಮುಖವೆನಿಸಲಿದೆ

ಒಟ್ಟು ಮುಖಾಮುಖಿ: 22

ಕೋಲ್ಕತಾ: 13

ಡೆಲ್ಲಿ: 09

ಸಂಭವನೀಯ ಆಟಗಾರರ ಪಟ್ಟಿ

ಕೆಕೆಆರ್‌: ಕ್ರಿಸ್‌ ಲಿನ್‌, ಸುನಿಲ್‌ ನರೈನ್‌, ರಾಬಿನ್‌ ಉತ್ತಪ್ಪ, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌(ನಾಯಕ), ಆ್ಯಂಡ್ರೆ ರಸೆಲ್‌, ಶುಭ್‌ಮನ್‌ ಗಿಲ್‌, ಪೀಯೂಷ್‌ ಚಾವ್ಲಾ, ಕುಲ್ದೀಪ್‌ ಯಾದವ್‌, ಹ್ಯಾರಿ ಗರ್ನಿ, ಪ್ರಸಿದ್ಧ್ ಕೃಷ್ಣ.

ಡೆಲ್ಲಿ: ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ರಿಷಭ್‌ ಪಂತ್‌, ಕಾಲಿನ್‌ ಇನ್‌ಗ್ರಾಂ, ಕ್ರಿಸ್‌ ಮೋರಿಸ್‌, ರಾಹುಲ್‌ ತೆವಾಟಿಯಾ, ಅಕ್ಷರ್‌, ಕಗಿಸೋ ರಬಾಡ, ಸಂದೀಪ್‌ ಲಮಿಚ್ಚಾನೆ, ಇಶಾಂತ್‌ ಶರ್ಮಾ.

ಸ್ಥಳ: ಕೋಲ್ಕತಾ 
ಪಂದ್ಯ ಆರಂಭ: ರಾತ್ರಿ 8ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!