ಆ್ಯಂಡ್ರೆ ರಸೆಲ್‌ಗೆ ಎರಡು ಬೀಮರ್ ಎಸೆತ ಎಸೆದ ಪರಿಣಾಣ RCB ವೇಗಿ ಮೊಹಮ್ಮದ್ ಸಿರಾಜ್ ಓವರ್‌ನ ಉಳಿದ ಎಸೆತ ಎಸೆಯಲು ಅವಕಾಶ ನಿರಾಕರಿಸಲಾಗಿತ್ತು. ಇತ್ತ ಡೇವಿಡ್ ಮಿಲ್ಲರ್‌ಗೆ CSK ವೇಗಿ ದೀಪಕ್ ಚಹಾರ್ 2 ಬೀಮರ್ ಎಸೆತ ಎದುರಿಸಿದರೂ ಓವರ್ ಮುಂದುವರಿಸಲು ಅವಕಾಶ ನೀಡಲಾಗಿದೆ. ಎರಡು ಪಂದ್ಯದಲ್ಲಿ ಎರಡು ನೀತಿ ಯಾಕೆ? ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.
ಚೆನ್ನೈ(ಏ.07): ರಾಯಲ್ ಚಾಲಂಜರ್ಸ್ ಬೆಂಗಳೂರು Vs ಕೋಲ್ಕತಾ ನೈಟ್ ರೈಡರರ್ಸ್ ವಿರುದ್ಧದ ಪಂದ್ಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ Vs ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿನ ಬೀಮರ್ ಎಸೆತ(ಅಪಾಯಕಾರಿ) ಭಾರಿ ಚರ್ಚೆಗೆ ಗ್ರಾಸವಾಗಿದೆ. RCB ವೇಗಿ ಮೊಹಮ್ಮದ್ ಸಿರಾಜ್ ಎರಡು ಬೀಮರ್ ಎಸೆತದಿಂದ ಬೌಲಿಂಗ್ ಅವಕಾಶವನ್ನೇ ಕಳೆದುಕೊಂಡರು. ಆದರೆ CSK ವೇಗಿ ದೀಪತ್ ಚಹಾರ್ ಎರಡು ಬೀಮರ್ ಎಸೆತ ಎಸೆದರೂ ಮತ್ತೆ ಬೌಲಿಂಗ್ ಮಾಡಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!
undefined
ಆಂಡ್ರೆ ರಸೆಲ್ ವಿರುದ್ಧ ಮೊಹಮ್ಮದ್ ಸಿರಾಜ್ ಸತತ 2 ಬೀಮರ್ ಎಸೆತ ಎಸೆದಿದ್ದರು. ಮೊದಲ ಎಸೆತಕ್ಕೆ ಎಚ್ಚರಿಕೆ ನೀಡಿದ್ದ ಅಂಪೈರ್, ಎರಡನೇ ಎಸತ ಎಸೆದ ತಕ್ಷಣವೇ ಸಿರಾಜ್ ಬೌಲಿಂಗ್ ಅವಕಾಶವನ್ನು ನಿರಾಕರಿಸಲಾಯಿತು. ಹೀಗಾಗಿ ಕೇವಲ 2 ಎಸೆತ ಎಸೆದ ಸಿರಾಜ್ ಓವರ್ ಮುಗಿಸದೆ ಹಿಂದೆ ಸರಿಯಬೇಕಾಯಿತು. ಇಲ್ಲಿ ಸಿರಾಜ್ ಎಸೆತದ ಬೀಮರ್ ಅಪಾಯಕಾರಿಯಾಗಿತ್ತು. ಹಾಗೂ ಈ ಬೀಮರ್ ಎಸೆತ ಬ್ಯಾಟ್ಸ್‌ಮನ್ ದೇಹಕ್ಕೆ ನೇರವಾಗಿತ್ತು. ಎಸೆತ ಬ್ಯಾಟ್ ಮಿಸ್ ಆದರೆ ಬ್ಯಾಟ್ಸ್‌ಮನ್‌ಗೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ಫೀಲ್ಡ್ ಅಂಪೈರ್ ಸಿರಾಜ್ ಬೌಲಿಂಗ್ ಅವಕಾಶವನ್ನು ನಿರಾಕರಿಸಲಾಯಿತು.
ಇದನ್ನೂ ಓದಿ:
ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ CSK ವೇಗಿ ದೀಪಕ್ ಚಹಾರ್ ಎಸೆದ ಬೀಮರ್ ಎಸೆತ ಅಪಾಯಕಾರಿ ಆಗಿರಲಿಲ್ಲ. ಸ್ಲೋ ಬಾಲ್ ಹಾಕಲು ಹೋಗಿ ಫುಲ್ ಟಾಸ್ ಹೋಗಿತ್ತು. ಇದು ಬ್ಯಾಟ್ಸ್‌ಮನ್ ದೇಹಕ್ಕೆ ನೇರವಾಗಿ ಇರಲಿಲ್ಲ. ಇದು ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಲ್ಲ ಅನ್ನೋದು ಸ್ಪಷ್ಟವಾಗಿತ್ತು. ಹೀಗಾಗಿ ಚಹಾರ್‌ಗೆ ಓವರ್ ಮುಂದುವರಿಸಲು ಅವಕಾಶ ನೀಡಲಾಗಿದೆ. ಬೀಮರ್ ಎಸೆತದಲ್ಲಿ ಬೌಲರ್‌ಗೆ ಮುಂದಿನ ಎಸೆತ ಎಸೆಯಲು ಅವಕಾಶ ನೀಡುವುದು ಅಥವಾ ನಿರಾಕರಿಸುವುದು ಫೀಲ್ಡ್ ಅಂಪೈರ್ ನಿರ್ಧಾರ.