IPL 2019: ಟಾಸ್ ಗೆದ್ದ KXP ಫೀಲ್ಡಿಂಗ್ ಆಯ್ಕೆ!

By Web DeskFirst Published Mar 30, 2019, 3:33 PM IST
Highlights

ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಅಭಿಮಾನಿಗಳು ಕತೂಹಲ ಹೆಚ್ಚಿಸಿದೆ. ಟಾಸ್ ಗೆದ್ದಿರುವ  ಪಂಜಾಬ್  ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಲ್ಲಿದೆ ತಂಡದ ವಿವರ.

ಮೊಹಾಲಿ(ಮಾ.30): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯಕ್ಕೆ ಮೊಹಾಲಿ ಆತಿಥ್ಯವಹಿಸುತ್ತಿದೆ. ತವರಿನ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಟಾಸ್ ಗೆದ್ದಿರುವ KXP  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

. continue with a winning combination while bring in leg-spinner for his first game in 2019.

Thoughts on the teams today? pic.twitter.com/spWAcLFkLE

— IndianPremierLeague (@IPL)

 

ಇದನ್ನೂ ಓದಿ: RCB ಬೂಮ್ರಾಗೆ ಹೆಚ್ಚಿದ ಬೇಡಿಕೆ- ಇತರ IPL ತಂಡಗಳಿಂದ ಆಹ್ವಾನ

ರಾಜಸ್ಥಾನ ರಾಯಲ್ಸ್ ವಿರುದ್ದ ಗೆಲುವು ಸಾಧಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ 2ನೇ ಗೆಲುವನ್ನು ಎದುರುನೋಡುತ್ತಿದೆ. ಇತ್ತ RCB ವಿರುದ್ದ ರೋಚಕ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ಪಂಜಾಬ್ ಮಣಿಸಲು ರಣತಂತ್ರ ರೂಪಿಸಿದೆ. ಉಭಯ ತಂಡಗಳು ಹೆಚ್ಚು ಬ್ಯಾಲೆನ್ಸಿಂಗ್ ಆಗಿದೆ.

ಇದನ್ನೂ ಓದಿ: ನೋ ಬಾಲ್ ವಿವಾದ: ರೆಫ್ರಿ ಕೊಠಡಿಗೆ ನುಗ್ಗಿ ಕೊಹ್ಲಿ ಕೂಗಾಟ?

ಪಂಜಾಬ್ ಹಾಗೂ ಮುಂಬೈ ಒಟ್ಟು 22 ಬಾರಿ ಮುಖಾಮುಖಿಯಾಗಿದೆ. ಮುಂಬೈ 12 ಗೆಲುವು ಸಾಧಿಸಿದ್ದರೆ, ಪಂಜಾಬ್ 10 ಗೆಲುವು ಸಾಧಿಸಿದೆ. ಸದ್ಯ ಪಂಜಾಬ್ ತಂಡದ ಕ್ರಿಸ್ ಗೇಲ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್‌ನಲ್ಲಿರುವುದು ಪಂಜಾಬ್ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂಬೈ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ಇನ್ನೂ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಲಸಿತ್ ಮಲಿಂಗ್ ಎದುರಾಳಿಯನ್ನು ಕಟ್ಟಿಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.
 

click me!