ಪ್ಲೇ ಆಫ್ ಲೆಕ್ಕಾಚಾರ: ಗೆಲ್ಲಲೇಬೇಕಾದ ಒತ್ತಡದಲ್ಲಿ KKR!

Published : Apr 25, 2019, 09:58 AM ISTUpdated : Apr 25, 2019, 03:28 PM IST
ಪ್ಲೇ ಆಫ್ ಲೆಕ್ಕಾಚಾರ: ಗೆಲ್ಲಲೇಬೇಕಾದ ಒತ್ತಡದಲ್ಲಿ KKR!

ಸಾರಾಂಶ

ಪ್ಲೇ ಆಫ್ ಸ್ಥಾನಕ್ಕೇರಲು ಇದೀಗ ಪೈಪೋಟಿ ಹೆಚ್ಚಾಗಿದೆ. ಪಂಜಾಬ್ ವಿರುದ್ಧ RCB ಗೆಲುವಿನೊಂದಿಗೆ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಇತ್ತ ಇಂದಿನ ಹೋರಾಟದಲ್ಲಿ ಮುಖಾಮುಖಿಯಾಗುತ್ತಿರುವ KKR ಹಾಗೂ ರಾಜಸ್ಥಾನ ತಂಡಕ್ಕೆ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.

ಕೋಲ್ಕತಾ(ಏ.25): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನಕ್ಕೇರುವ ಪೈಪೋಟಿ ಜೋರಾಗಿದೆ. ಪ್ರತಿ ತಂಡದ ಫಲಿತಾಂಶ ಕೂಡ ಈಗ ಮುಖ್ಯ. ಇಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. 

ಇದನ್ನೂ ಓದಿ: RCBಗೆ ಹ್ಯಾಟ್ರಿಕ್ ಗೆಲುವು- ಅಂಕಪಟ್ಟಿಯಲ್ಲಿ ಏರಿಕೆ ಕಂಡ ಕೊಹ್ಲಿ ಬಾಯ್ಸ್!

ಉಭಯ ತಂಡಗಳಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯ. ಅದರಲ್ಲೂ KKR ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಇನ್ನುಳಿದ 4 ಪಂದ್ಯಗಳನ್ನೂ ಗೆಲ್ಲಲಬೇಕಿದೆ. ಸದ್ಯ ಆಡಿದ 10ರಲ್ಲಿ 4 ಗೆಲುವಿನ ಮೂಲಕ 8 ಅಂಕಗಳಿಸಿದೆ. ಹೀಗಾಗಿ ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೆ 16 ಅಂಕಗಳೊಂದಿಗೆ ಪ್ಲೇ ಆಫ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಆಪತ್ತು- ತವರಿನ ಪಂದ್ಯ ಡೌಟ್!

ಇತ್ತ ರಾಜಸ್ಥಾನ ರಾಯಲ್ಸ್ 10ರಲ್ಲಿ 3 ಪಂದ್ಯ ಗೆದ್ದಿದೆ. ಹೀಗಾಗಿ ಇನ್ನುಳಿದ 4 ಪಂದ್ಯ ಗೆದ್ದರೆ 14 ಅಂಕ ಸಂಪಾದಿಸಲು ಸಾಧ್ಯವಿದೆ. ಆದರೆ ಪ್ಲೇ ಆಫ್ ಸ್ಥಾನ ಸಂಪಾದಿಸಲು ಉಳಿತ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕು. ತವರಿನಲ್ಲಿ ಕೆಕೆಆರ್ ಬಲಿಷ್ಠವಾಗಿದೆ ನಿಜ. ಆದೆರೆ ರಾಜಸ್ಥಾನ ರಾಯಲ್ಸ್ ಉತ್ತಮ ಲಯ ಕಂಡುಕೊಂಡಿದ್ದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?