RCB ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ ಸಂಚುರಿ ಸ್ಟಾರ್!

By Web Desk  |  First Published Apr 25, 2019, 12:33 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಟ್ರಿಕ್ ಗೆಲುವಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಕ್ಷಿಯಾಗಿದ್ದು ವಿಶೇಷ. ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ದಿನ, ಶಿವರಾಜ್ ಕುಮಾರ್‌ಗೆ RCB ಗೆಲುವಿನ ಗಿಫ್ಟ್ ನೀಡಿದೆ. 


ಬೆಂಗಳೂರು(ಏ.25): ರಾಯಲ್ ಚಾಲೆಂಜರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ರೋಚಕ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಅಂತಿಮ ಎಸೆತದವರೆಗೂ ಥ್ರಿಲ್ ನೀಡಿತ್ತು. ಈ ರೋಚಕ ಪಂದ್ಯ ವೀಕ್ಷಿಸಲು ಸ್ಯಾಂಡಲ್‌ವುಡ್ ಸ್ಟಾರ್ ನಟ ಶಿವರಾಜ್ ಕುಮಾರ್ ಹಾಜರಾಗಿದ್ದರು.  ಡಾ.ರಾಜ್ ಕುಮಾರ್ ಹುಟ್ಟು ಹಬ್ಬದ ದಿನ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡ ಶಿವರಾಜ್ ಕುಮಾರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು.

ಇದನ್ನೂ ಓದಿ: RCBಗೆ ಹ್ಯಾಟ್ರಿಕ್ ಗೆಲುವು- ಅಂಕಪಟ್ಟಿಯಲ್ಲಿ ಏರಿಕೆ ಕಂಡ ಕೊಹ್ಲಿ ಬಾಯ್ಸ್!

Tap to resize

Latest Videos

undefined

ತಂದೆಯ ಹುಟ್ಟುಹಬ್ಬದ ದಿನ RCB ಪಂದ್ಯ ವೀಕ್ಷಿಸಿದ ಶಿವರಾಜ್ ಕುಮಾರ್‌ಗೆ ಗೆಲುವಿನ ಗಿಫ್ಟ್ ಸಿಕ್ಕಿದೆ. ವಿಶೇಷ ಅಂದರೆ RCB ಹ್ಯಾಟ್ರಿಕ್ ಗೆಲುವಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಕ್ಷಿಯಾಗಿದ್ದಾರೆ. ಎಬಿ ಡಿವಿಲಿಯರ್ಸ್ ಸಿಡಿಸಿದ ಪ್ರತಿ ಬೌಂಡರಿ ಸಿಕ್ಸರ್‌ಗೆ ಶಿವರಾಜ್ ಕುಮಾರ್‌ ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಇನ್ನು RCB ಫ್ಲ್ಯಾಗ್ ಹಿಡಿದು ಶಿವರಾಜ್ ಕುಮಾರ್ ಕೊಹ್ಲಿ ಸೈನ್ಯವನ್ನು ಹುರಿದುಂಬಿಸಿದರು.

ಇದನ್ನೂ ಓದಿ: ಅಂದು ಧೋನಿ, ಇಂದು ಪಾರ್ಥೀವ್ -ಮರುಕಳಿಸಿತು ಇತಿಹಾಸ!

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 202 ರನ್ ಸಿಡಿಸಿತ್ತು. ಎಬಿ ಡಿವಿಲಿಯರ್ಸ್ 44 ಎಸೆತದಲ್ಲಿ 82 ರನ್ ಸಿಡಿಸಿದರೆ, ಪಾರ್ಥೀವ್ ಪಟೇಲ್ 43 ಹಾಗೂ ಮಾರ್ಕಸ್ ಸ್ಟೋಯ್ನಿಸ್ 46 ರನ್ ಸಿಡಿಸಿದ್ದರು. 203 ರನ್ ಟಾರ್ಗೆಟ್ ಪಡೆದ ಪಂಜಾಬ್ 7 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿತು. ಈ ಮೂಲಕ RCB 17 ರನ್  ಗೆಲುವು ಸಾಧಿಸಿದೆ.

click me!