ಲಾಸ್ಟ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

Published : May 04, 2019, 04:20 PM ISTUpdated : May 04, 2019, 04:38 PM IST
ಲಾಸ್ಟ್ ಪಂದ್ಯಕ್ಕೂ ಮುನ್ನ  ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ RCB ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯಲಿದೆ. ಇದು ಬೆಂಗಳೂರು ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ನೀಡಿದ್ದಾರೆ. 

ಬೆಂಗಳೂರು(ಮೇ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಂದು(ಮೇ.04) ಕೊನೆಯ ಲೀಗ್ ಪಂದ್ಯ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ RCB, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ RCB, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಮತ್ತೊಮ್ಮೆ ಕನ್ನಡ ಮಾತಾಡಿದ ಎಬಿಡಿ..! ಹಾಡಂತೂ ಸೂಪರ್

RCB ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಸ್ಪೆಷಲ್ ಸಂದೇಶ ನೀಡಿದ್ದಾರೆ. ಸೋಲು ಗೆಲುವಿನಲ್ಲಿ RCB ಬೆಂಬಲಿಸಿದ ಎಲ್ಲಾಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಕಳೆದ ಪಂದ್ಯದ ವೇಳೆ ಮಳೆ ಇದ್ದರೂ, ಪಂದ್ಯ ರಾತ್ರಿ 12 ಗಂಟೆ ಕಳೆದರೂ ಅಭಿಮಾನಿಗಳು RCB ತಂಡವನ್ನು ಬೆಂಬಲಿಸಿದ್ದೀರ. ನಿಮ್ಮ ಪ್ರೀತಿಗೆ ಚಿರಋಣಿ ಎಂದಿದ್ದಾರೆ.

 

 

ಇದನ್ನೂ ಓದಿ: ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

12ನೇ ಆವೃತ್ತಿ ಐಪಿಎಲ್ ಟೂರ್ನಿ RCB ಅಭಿಮಾನಿಗಳಿಗೆ ನಿರಾಸೆ ತಂದಿದೆ. ನಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಆದರೆ ಫಲಿತಾಂಶ ಭಿನ್ನವಾಗಿತ್ತು.  ಮುಂದಿನ ವರ್ಷ ಅಭಿಮಾನಿಗಳ ನಿರೀಕ್ಷೆ ತಕ್ಕಂತೆ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಭಾರತ ಎದುರು ಆಡಬೇಕಂದ್ರೆ..?' ಪಾಕಿಸ್ತಾನದ ಮೂರೂ ಡಿಮ್ಯಾಂಡ್ ರಿಜೆಕ್ಟ್ ಮಾಡಿದಿ ಐಸಿಸಿ! ಕೊನೆಗೂ ತೆಪ್ಪಗಾದ ಪಿಸಿಬಿ
ಉದ್ಯಮಿ ಮಗಳನ್ನು ಪ್ರೀತಿಸಿದ ಗೌತಮ್ ಗಂಭೀರ್; ಪತ್ನಿ ನತಾಶಾ ಬಗ್ಗೆ ನಿಮಗೆ ಗೊತ್ತಿಲ್ಲದ ಸೀಕ್ರೆಟ್ಸ್