IPL 2019: ಡೆಲ್ಲಿಗೆ 167 ರನ್ ಟಾರ್ಗೆಟ್ ನೀಡಿದ ಪಂಜಾಬ್!

By Web DeskFirst Published Apr 1, 2019, 9:50 PM IST
Highlights

ತವರಿನಲ್ಲಿ ಅಬ್ಬರಿಸೋ ವಿಶ್ವಾಸದಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಡೆಲ್ಲಿ ವಿರುದ್ಧ ಹಲವು ಅಡೆ ತಡೆ ಎದುರಿಸಿದ ಪಂಜಾಬ್ 166 ರನ್ ಸಿಡಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಮೊಹಾಲಿ(ಏ.01): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಆತಿಥೇಯ ಕಿಂಗ್ಸ್ ಇಲೆವೆನ್ ಆರಂಭಿಕ ಕುಸಿತದ ನಡವೆಯೂ ದಿಟ್ಟ ಹೋರಾಟ ನೀಡಿದೆ.  ಪಂಜಾಬ್ 9 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 167 ರನ್ ಚೇಸ್ ಮಾಡಬೇಕಿದೆ.

ಇದನ್ನೂ ಓದಿ: ಚೆನ್ನೈ ವಿರುದ್ಧದ ಸೋಲಿನ ಬೆನ್ನಲ್ಲೇ RR ನಾಯಕ ರಹಾನೆಗೆ ಸಂಕಷ್ಟ!

ಪಂಜಾಬ್ ತಂಡದ ಕೆಎಲ್ ರಾಹುಲ್ ಹಾಗೂ ಸ್ಯಾಮ್ ಕುರ್ರನ್ ಮೊದಲ ವಿಕೆಟ್‌ಗೆ ಕೇವಲ 15 ರನ್ ಜೊತೆಯಾಟ ನೀಡಿದರು. ರಾಹುಲ್ 15 ರನ್ ಸಿಡಿಸಿ ಔಟಾದರು. ಕುರ್ರನ್ ಹೋರಾಟ 20 ರನ್‌ಗಳಿಗೆ ಅಂತ್ಯವಾಯಿತು. ಕನ್ನಡಿಗ ಮಯಾಂಕ್ ಅಗರ್ವಾಲ್ ಕೇವಲ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು.

ಇದನ್ನೂ ಓದಿ: IPL 2019:RCB ಹೀನಾಯ ಪ್ರದರ್ಶನಕ್ಕೆ ಟ್ವಿಟರಿಗರ ಆಕ್ರೋಶ!

ಸರ್ಫಾರಾಜ್ ಖಾನ್ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟದಿಂದ ಪಂಜಾಬ್ ಚೇತರಿಸಿಕೊಂಡಿತು. ಸರ್ಫರಾಜ್ 29 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು. ಆದರೆ ಮಿಲ್ಲರ್ ಹೋರಾಟ ಮುಂದುವರಿಸಿದರು. ಮಿಲ್ಲರ್ 30 ಎಸೆತದಲ್ಲಿ 43 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ  ಮನ್ದೀಪ್ ಸಿಂಗ್ ಅಜೇಯ 29 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ 9 ವಿಕೆಟ್ ನಷ್ಟಕ್ಕೆ ರನ್ 166 ಸಿಡಿಸಿತು. ಡೆಲ್ಲಿ ಪರ ಕ್ರಿಸ್ ಮೊರಿಸ್ 3 ಹಾಗೂ ಸಂದೀಪ್ ಲಿಮ್ಚಾನೆ ಹಾಗೂ ಕಾಗಿಸೋ ರಬಾಡ ತಲಾ 2 ವಿಕೆಟ್ ಕಬಳಿಸಿದರು. 

click me!