IPL 2019: ರಾಜಸ್ಥಾನ ವಿರುದ್ಧ CSKಗೆ 8 ರನ್ ರೋಚಕ ಗೆಲುವು!

By Web DeskFirst Published Apr 1, 2019, 12:14 AM IST
Highlights

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ CSK ಅಭಿಮಾನಿಗಳಿಗೆ ಫುಲ್ ಪೈಸಾ ವಸೂಲ್. ಧೋನಿ ಸಿಕ್ಸರ್ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಾಯಕ ನಿರಾಸೆ ಮಾಡಲಿಲ್ಲ. ಇಷ್ಟೇ ಅಲ್ಲ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. CSK vs RR ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ಚೆನ್ನೈ(ಮಾ.31): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿತು. ಕೊನೆಯ ಓವರ್‌ ವರೆಗೂ ಗೆಲುವು ಯಾರಿಗೆ ಅನ್ನೋದು ಕುತೂಹಲವಾಗಿತ್ತು. ಆದರೆ ಧೋನಿ ಚಾಣಾಕ್ಷ ನಾಯಕತ್ವ ಹಾಗೂ CSK ಬೌಲರ್‌ಗಳ ಅದ್ಬುತ ದಾಳಿಗೆ ರಾಜಸ್ಥಾನ ರಾಯಲ್ಸ್ ಸೊಲೊಪ್ಪಿಕೊಂಡಿತು. 

ಗೆಲುವಿಗೆ 176 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್‌ಗೆ ಮೊದಲ ಓವರ್‌ನಲ್ಲಿ ಆಘಾತ ಎದುರಾಯ್ತು. ದೀಪಕ್ ಚಹಾರ್ 2ನೇ ಎಸೆತದಲ್ಲಿ ನಾಯಕ ಅಜಿಂಕ್ಯ ರಹಾನೆ ಕ್ಯಾಚ್ ನೀಡಿದರು. ಅದ್ಬುತ ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ರಹಾನೆಗೆ ಪೆವಿಲಿಯನ್ ಹಾದಿ ತೋರಿಸಿದರು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ಸಂಜು ಸಾಮ್ಸನ್ ಕೇವಲ 8 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: IPL 2019:RCB ಹೀನಾಯ ಪ್ರದರ್ಶನಕ್ಕೆ ಟ್ವಿಟರಿಗರ ಆಕ್ರೋಶ!

ಜೋಸ್ ಬಟ್ಲರ್ ಹೋರಾಟ 6 ರನ್‌ಗೆ ಅಂತ್ಯವಾಯಿತು. ರಾಹುಲ್ ತ್ರಿಪಾಠಿ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟ ರಾಯಲ್ಸ್‌ಗೆ ಚೇತರಿಕೆ ನೀಡಿತು. ಆದರೆ ತ್ರಿಪಾಠಿ 39 ರನ್ ಸಿಡಿಸಿ ತಾಹಿರ್‍‌‌ಗೆ ವಿಕೆಟ್ ಒಪ್ಪಿಸಿದರು. ಸ್ಟೀವ್ ಸ್ಮಿತ್ 28 ರನ್ ಸಿಡಿಸಿ ಪೆವಿಲಿಯನ್ ಸೇರಿದರು. 94 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ ಸೋಲಿನ ಸುಳಿಗೆ ಸಿಲುಕಿತು.

ಇದನ್ನೂ ಓದಿ: 113 ರನ್‌ಗೆ ಆಲೌಟ್- 12ನೇ ಆವೃತ್ತಿಯಲ್ಲಿ RCBಗೆ ಹ್ಯಾಟ್ರಿಕ್ ಸೋಲು!

ಕನ್ನಡಿಗ ಕೆ ಗೌತಮ್ ಕೇವಲ 9 ರನ್ ಸಿಡಿಸಿ ಔಟಾದರು. ಆದರೆ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಅಂತಿಮ 12 ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು. ಸ್ಟೋಕ್ಸ್ ಅಬ್ಬರ ಮುಂದುವರಿಸಿದರು. ಆದರೆ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಸ್ಟೋಕ್ಸ್ ವಿಕೆಟ್ ಪತನಗೊಂಡಿತು. 

ಸ್ಟೋಕ್ಸ್ 46 ರನ್ ಸಿಡಿಸಿ ಔಟಾದರು.  ಶ್ರೇಯಸ್ ಗೋಪಾಲ್ ಕೂಡ ವಿಕೆಟ್ ಕೈಚೆಲ್ಲಿದರು. ಹೀಗಾಗಿ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿತು. ಈ ಮೂಲಕ ಚೆನ್ನೈ 8 ರನ್‌ಗಳ ರೋಚಕ ಗೆಲುವು ಸಾಧಿಸಿತು. 
 

click me!