ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿಗೆ ರೆಡಿಯಾಗಿದೆ. ಹರಾಜಿಗೂ ಮೊದಲು ಆರ್‌ಸಿಬಿ ತಂಡ ಹೇಗಿದೆ? ಯಾರೆಲ್ಲಾ ತಂಡದಲ್ಲಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ.
ಬೆಂಗಳೂರು(ಡಿ.16): ಐಪಿಎಲ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಇದೀಗ ಡಿಸೆಂಬರ್ಲ18 ರಂದು ಜೈಪುರದಲ್ಲಿ ನಡೆಯಲಿರುವ ಹರಾಜಿನಲ್ಲಿ ಪ್ರಮುಖ ಆಟಗಾರರನ್ನ ಖರೀದಿಸಲು ಆರ್‌ಸಿಬಿ ಮುಂದಾಗಿದೆ.
ಇದನ್ನೂ ಓದಿ: ಪರ್ತ್ ಟೆಸ್ಟ್: ಸಚಿನ್, ಕ್ಲೈವ್ ಲಾಯ್ಡ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!
ಕಳೆದ ತಿಂಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಆಟಗಾರರಿಗೆ ಕೊಕ್ ನೀಡಿ ಹಲವು ಕ್ರಿಕೆಟಿಗರನ್ನ ತಂಡದಲ್ಲೇ ಉಳಿಸಿಕೊಂಡಿತ್ತು. ಇದೀಗ ಹರಾಜು ಪ್ರಕ್ರಿಯೆಗೂ ಮೊದಲು ಆರ್‌ಸಿಬಿ ತಂಡದ ವಿವರ ಇಲ್ಲಿದೆ.