ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದ 3ನೇ ದಿನ ಮುಕ್ತಾಯವಾಗಿದೆ. ತೃತೀಯ ದಿನದಾಟದಲ್ಲಿ ಆಸಿಸ್ ಮೇಲುಗೈ ಸಾಧಿಸಿದೆ. ಆರಂಭದಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ ಆಸಿಸಿ ಇದೀಗ ಬ್ಯಾಟಿಂಗ್ 4 ವಿಕೆಟ್ ಕಳೆದುಕೊಂಡರೂ ಮುನ್ನಡೆ ಸಾಧಿಸಿದೆ.
ಪರ್ತ್(ಡಿ.16): ಪರ್ತ್ ಟೆಸ್ಟ್ ಪಂದ್ಯದ 3ನೇ ದಿನ ಆಸ್ಟ್ರೇಲಿಯಾ ಮೇಲಗೈ ಸಾಧಿಸಿದೆ. ಟೀಂ ಇಂಡಿಯಾವನ್ನ 283 ರನ್‌ಗೆ ಆಲೌಟ್ ಮಾಡಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಇದೀಗ 175 ರನ್ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಭಾರತಕ್ಕೆ ಬೃಹತ್ ಗುರಿ ನೀಡುವ ಸೂಚನೆ ನೀಡಿದೆ.
ಟೀಂ ಇಂಡಿಯಾವನ್ನ 282 ರನ್‌ಗೆ ಆಲೌಟ್ ಮಾಡಿ, 43 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮಾರ್ಕಸ್ ಹ್ಯಾರಿಸ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್‌ಗೆ 59 ರನ್ ಜೊತೆಯಾಟ ನೀಡಿದರು. ಹ್ಯಾರಿಸ್ 20 ರನ್ ಕಾಣಿಕೆ ನೀಡಿದರೆ, ಫಿಂಚ್ 25 ರನ್ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿದರು.
ಇದನ್ನೂ ಓದಿ: ಪರ್ತ್ ಟೆಸ್ಟ್: ಸಚಿನ್, ಕ್ಲೈವ್ ಲಾಯ್ಡ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!
ಉಸ್ಮಾನ್ ಖವಾಜ ತಂಡಕ್ಕೆ ಆಸರೆಯಾದರು. ಶಾನ್ ಮಾರ್ಶ್, ಪೀಟರ್ ಹ್ಯಾಂಡ್ಸ್‌ಕಾಂಬ್ ಬಹುಬೇಗನೆ ನಿರ್ಗಮಿಸಿದರು. ಟ್ರಾವಿಸ್ ಹೆಡ್ 19 ರನ್‌ಗಳಿಸಿ ಔಟಾದರು. ದಿನದಾಟ ಅಂತ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿದೆ. ಈ ಮೂಲಕ 175 ರನ್ ಮುನ್ನಡೆ ಪಡೆದುಕೊಂಡಿದೆ. 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಮೊಹಮ್ಮದ್ ಶಮಿ 2 ವಿಕೆಚ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಐಪಿಎಲ್ ಹರಾಜಿಗೂ ಮುನ್ನ ಅರ್‌ಸಿಬಿಗೆ ಶಾಕ್ ನೀಡಿದ ಕೋಚ್!
ದ್ವಿತೀಯ ದಿನ 3 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿದ್ದ ಭಾರತ ತೃತೀಯ ದಿನ ಬ್ಯಾಟಿಂಗ್ ಮುಂದುವರಿಸಿತು. ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದರು. ಕೊಹ್ಲಿ 123 ರನ್ ಸಿಡಿಸಿ ಔಟಾದರು. ಆದರೆ ಅಜಿಂಕ್ಯ ರಹಾನೆ 51 ರನ್ ಸಿಡಿಸಿ ನಿರ್ಗಮಿಸಿದರು.
ಇದನ್ನೂ ಓದಿ: ಐಪಿಎಲ್ ಹರಾಜು: 6 ಭಾರತೀಯ ಆಟಗಾರರನ್ನ ಖರೀದಿಸಲು ಮುಂಬೈ ಪ್ಲಾನ್!
ಹನುಮಾ ವಿಹಾರಿ 20, ರಿಷಬ್ ಪಂತ್ 36 ರನ್ ಕಾಣಿಕೆ ನೀಡಿದರು. ಬೌಲರ್‌ಗಳಿಂದ ರನ್ ಹರಿದುಬರಲಿಲ್ಲ. ಹೀಗಾಗಿ ಭಾರತ 283 ರನ್‌ಗಳಿಗೆ ಆಲೌಟ್ ಆಯಿತು. ಇಷ್ಟೇ ಅಲ್ಲ ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್ ಹಿನ್ನಡೆ ಅನುಭವಿಸಿತು.