BWF ವಿಶ್ವ ಟೂರ್ ಬ್ಯಾಡ್ಮಿಂಟನ್: ಇತಿಹಾಸ ಬರೆದ ಪಿವಿ ಸಿಂಧು!

By Web DeskFirst Published Dec 16, 2018, 4:12 PM IST
Highlights

BFW ವಿಶ್ವ ಟೂರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಇತಿಹಾಸ ರಚಿಸಿದ್ದಾರೆ. ಕಳೆದ  ಬಾರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು, ಇದೀಗ ಚಾಂಪಿಯನ್ ಆಗಿ ಮಿಂಚಿದ್ದಾರೆ.

ಗುವಾಂಗ್ಝು (ಚೀನಾ)ಡಿ.16: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು BFW ವಿಶ್ವ ಟೂರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇತಿಹಾಸ ರಚಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಜಪಾನ್‌ನ  ಸ್ಟಾರ್ ಪಟು ನೊಜೊಮಿ ಒಕುಹಾರ ವಿರುದ್ಧ ಗೆಲವು ಸಾಧಿಸಿ ಸೇಡು ತೀರಿಸಿಕೊಂಡರು.

ಇದನ್ನೂ ಓದಿ: ಪರ್ತ್ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯಾಗೆ 175 ರನ್ ಮುನ್ನಡೆ

ಪ್ರತಿಷ್ಠಿತ ಟೂರ್ನಿಯ ಪ್ರಶಸ್ತಿ ಘಟ್ಟದಲ್ಲಿ ಎದುರಾಗುತ್ತಿದ್ದ ನಜೊಮಿ ಒಕುಹಾರ ಮೇಲುಗೈ ಸಾಧಿಸಿದ್ದರು. ಇದೀಗ  BFW ವಿಶ್ವ ಟೂರ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲೇ ಒಕುಹಾರಗೆ 21-19, 21-17 ಅಂತರದಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ: ಪರ್ತ್ ಟೆಸ್ಟ್: ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ವೈರಲ್..!

ಈ ಗೆಲುವಿನ ಮೂಲಕ  BFW ವಿಶ್ವ ಟೂರ್ ಬ್ಯಾಡ್ಮಿಂಟನ್ ಗೆದ್ದ ಮೊದಲ ಭಾರತೀಯ ಮಹಿಳೆ ಅನ್ನೋ ಖ್ಯಾತಿಗೆ ಸಿಂಧು ಪಾತ್ರರಾಗಿದ್ದಾರೆ. 2017ರಲ್ಲಿ ನಡೆದ  BFW ವಿಶ್ವ ಟೂರ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲೇ ಇದೇ ಒಕುಹಾರ ವಿರುದ್ದ ಸಿಂಧು ಸೋಲು ಅನುಭವಿಸಿದ್ದರು. ಈ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು. 

click me!