ಸ್ಟಾರ್ ಹಾಗೂ ಪ್ರಮುಖ ಆಟಗಾರರನ್ನ ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಸದ್ಯ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದೆ. ಇದೀಗ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರರನ್ನ ಖರೀದಿಸಲು ಮುಂಬೈ ಪ್ಲಾನ್ ಮಾಡಿದೆ. ಹರಾಜಿಗೂ ಮೊದಲು ಮುಂಬೈ ತಂಡ ಹೇಗಿದೆ? ಇಲ್ಲಿದೆ ವಿವರ.
ಮುಂಬೈ(ಡಿ.16): ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೆ ಇದೆ. ಇದೀಗ ಹರಾಜಿನಲ್ಲಿ ಮತ್ತಷ್ಟು ಆಟಗಾರರನ್ನ ಸೇರಿಸಿಕೊಂಡ ಬಲಿಷ್ಠ ತಂಡ ಕಟ್ಟಲು ನೀತಾ ಅಂಬಾನಿ ಬ್ರಿಗೇಡ್ ಸಜ್ಜಾಗಿದೆ.
ಇದನ್ನೂ ಓದಿ: ಐಪಿಎಲ್ 2019: ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಹೀಗಿದೆ!
ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಇವಿನ್ ಲಿವಿಸ್, ಕೀರನ್ ಪೊಲಾರ್ಡ್ ಸೇರಿದಂತೆ ಅತ್ಯುತ್ತಮ ಆಟಗಾರರನ್ನ ಮುಂಬೈ ತಂಡ ರೀಟೈನ್ ಮಾಡಿಕೊಂಡಿದೆ. 2018ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡು ಲೀಗ್ ಹಂತದಿಂದಲೇ ಹೊರಬಿದ್ದಿತ್ತು.
ಇದನ್ನೂ ಓದಿ: ಇನಿಂಗ್ಸ್‌ನಲ್ಲಿ 10 ವಿಕೆಟ್- ಕುಂಬ್ಳೆ ದಾಖಲೆ ಸರಿಗಟ್ಟಿದ ಮಣಿಪುರ ವೇಗಿ
ಈ ಬಾರಿಯ ಹರಾಜಿಗೂ ಮೊದಲು ಮುಂಬೈ ಇಂಡಿಯನ್ಸ್ ಸಂಪೂರ್ಣ ತಂಡ ಇಲ್ಲಿದೆ