ಐಪಿಎಲ್ ಹರಾಜು ಪಟ್ಟಿ ಬೆಳೆಯುತ್ತಲೇ ಇದೆ. 346 ಆಟಗಾರರಿದ್ದ ಪಟ್ಟಿ ಇದೀಗ 351ಕ್ಕ ಏರಿಕೆಯಾಗಿದೆ. ಆರಂಭದಲ್ಲಿ ನಾಲ್ವರು ಕ್ರಿಕೆಟಿಗರನ್ನ ಸೇರಿಸಿಕೊಂಡಿದ್ದ ಬಿಸಿಸಿಐ, ಇದೀಗ ಮತ್ತೊಬ್ಬನಿಗೆ ಅವಕಾಶ ನೀಡಿದೆ.
ಜೈಪುರ(ಡಿ.18): ಐಪಿಎಲ್ ಹರಾಜಿಗೆ ಕೆಲ ಕ್ಷಣಗಳು ಮಾತ್ರ ಬಾಕಿ. ಅಂತಿಮ ಕ್ಷಣದಲ್ಲಿ ಬಿಸಿಸಿಐ ಹರಾಜು ಆಟಗಾರರ ಪಟ್ಟಿಗೆ ಮತ್ತೊಬ್ಬ ಕ್ರಿಕೆಟಿಗನನ್ನ ಸೇರಿಸಿಕೊಳ್ಳಲಾಗಿದೆ. ನಿನ್ನೆ(ಡಿ.17) 346 ಆಟಗಾರರಿದ್ದ ಪಟ್ಟಿಗೆ ನಾಲ್ವರನ್ನ ಸೇರಿಸಿ 350 ಮಾಡಲಾಗಿತ್ತು. ಇದೀಗ ಹರಾಜಿನ ಕಣದಲ್ಲಿರುವ ಆಟಗಾರರ ಪಟ್ಟಿ 351ಕ್ಕೇ ಏರಿಕೆಯಾಗಿದೆ.
ಇದನ್ನೂ ಓದಿ: #IPLAuction2019 ಹರಾಜಿನಲ್ಲಿ ಯಾವ ಕ್ರಿಕೆಟಿಗ ಯಾವ ತಂಡಕ್ಕೆ..?
ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ರಿಲೆ ಮೆರಿಡಿತ್, ಭಾರತೀಯ ಆಟಗಾರರಾದ ಮಯಾಂಕ್ ದಗಾರ್ ಹಾಗೂ ಪ್ರಣವ್ ಗುಪ್ತಾ ಅವರನ್ನ ಸೇರಿಸಿಕೊಳ್ಳಲಾಗಿತ್ತು. ಇದೀಗ ಸೌತ್ಆಫ್ರಿಕಾದ ರಸಿ ವ್ಯಾಂಡರ್ ಡಸ್ಸೆನ್ ಅವರನ್ನೂ ಹರಾಜಿನ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಐಪಿಎಲ್ ಹರಾಜಿಗೂ ಮೊದಲೇ ಮುಂಬೈ ಪಾಲಾದ ಜಹೀರ್ ಖಾನ್!
8 ಫ್ರಾಂಚೈಸಿಗಳು ಇದೀಗ ಆಟಗಾರರನ್ನ ಖರೀದಿ ಮಾಡಲಿದ್ದಾರೆ. 351 ಆಟಗಾರರಲ್ಲಿ 8 ಫ್ರಾಂಚೈಸಿಗಳು 70 ಆಟಗಾರರನ್ನ ಖರೀದಿ ಮಾಡಲಿದೆ. ಭಾರತದ ಯುವರಾಜ್ ಸಿಂಗ್, ಅಕ್ಷರ್ ಪಟೇಲ್, ಜಯದೇವ್ ಉನಾದ್ಕಟ್, ಮೊಹಮ್ಮದ್ ಶಮಿ ಸೇರಿದಂತೆ ಹಲವು ಆಟಗಾರರು ಹರಾಜಿನಲ್ಲಿದ್ದಾರೆ.