
ಹೈದರಾಬಾದ್(ಮೇ.05]: ಯುವ ಬ್ಯಾಟ್ಸ್’ಮನ್’ಗಳ ಅಬ್ಬರದಿಂದ ಐಪಿಎಲ್ ಪ್ಲೇ-ಆಫ್ ರೇಸ್’ನಲ್ಲಿ ಉಳಿದುಕೊಂಡಿರುವ ಡೆಲ್ಲಿ ಡೇರ್ ಡೆವಿಲ್ಸ್, ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬಲಿಷ್ಠ ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಹೋರಾಡಲಿದೆ.
ಪ್ಲೇ-ಆಫ್’ಗೇರಬೇಕಿದ್ದರೆ ಡೆಲ್ಲಿ ಉಳಿದಿರುವ ಎಲ್ಲಾ 5 ಪಂದ್ಯಗಳಲ್ಲೂ ಗೆಲ್ಲಲೇಬೇಕಿದೆ. ಮತ್ತೊಂದೆಡೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್’ರೈಸರ್ಸ್, ಡೆಲ್ಲಿ ಓಟಕ್ಕೆ ಕಡಿವಾಣ ಹಾಕಿ ಟೂರ್ನಿಯಿಂದ ಹೊರದಬ್ಬಲು ಕಾಯುತ್ತಿದೆ. ಡೆಲ್ಲಿ ತನ್ನ ಯುವ ಬ್ಯಾಟಿಂಗ್ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದರೆ, ಸನ್’ರೈಸರ್ಸ್ ತನ್ನ ಬಲಿಷ್ಠ ಬೌಲಿಂಗ್ ಪಡೆಯ ಮೇಲೆ ಅವಲಂಬಿತಗೊಂಡಿದೆ.
ಪೃಥ್ವಿ, ಶ್ರೇಯಸ್, ರಿಶಭ್ ಹಾಗೂ ರೈಸರ್ಸ್ ಬೌಲರ್‌ಗಳ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ.
ಪಂದ್ಯ ಆರಂಭ: ಸಂಜೆ 8 ಗಂಟೆಗೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.