
ಮೊಹಾಲಿ[ಏ.10]: ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸಣ್ಣದೊಂದು ಭಯದಲ್ಲೇ ಆಡಿದ ಪ್ರಸಂಗ ಸೋಮವಾರ ರಾತ್ರಿ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ನಡೆಯಿತು.
ಅಶ್ವಿನ್ ಅವರ ‘ಮಂಕಡಿಂಗ್’ ತಂತ್ರಗಾರಿಕೆಯ ಬಗ್ಗೆ ಬಹಳ ಎಚ್ಚರಿಕೆಯಿಂದ ಆಡಿರುವುದು ಕಂಡು ಬಂತು. ಅಶ್ವಿನ್ ಕೈಗೆ ಚೆಂಡು ಸೇರುತ್ತಿದ್ದಂತೆ ವಾರ್ನರ್ ಎಚ್ಚೆತ್ತುಕೊಳ್ಳುತ್ತಿದ್ದರು. ಅನಗತ್ಯವಾಗಿ ರನ್ ಓಟಕ್ಕೆ ಮುಂದಾಗುವ ಗೋಜಿಗೆ ಹೋಗಲಿಲ್ಲ. ಅಶ್ವಿನ್ ಓವರ್‌ನಲ್ಲಿ ವಾರ್ನರ್ ಕ್ರೀಸ್ ಬಿಟ್ಟು ಹೋಗುವ ಧೈರ್ಯವನ್ನೇ ತೋರಲಿಲ್ಲ. ಈ ವಿಡಿಯೋ ತುಣುಕನ್ನು ಐಪಿಎಲ್ ವೆಬ್‌ಸೈಟ್‌ನಲ್ಲಿ ಅಪ್’ಲೋಡ್ ಮಾಡಲಾಗಿದ್ದು, ಸಾಕಷ್ಟು ವೈರಲ್ ಆಗಿದೆ.
ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಮಂಕಡಿಂಗ್ ಭಯದಲ್ಲೇ ಬ್ಯಾಟ್ ಬೀಸಿದ ವಾರ್ನರ್, 62 ಎಸೆತಗಳಲ್ಲಿ ಕೇವಲ 70 ರನ್ ಬಾರಿಸಿ ಅಜೇಯರಾಗುಳಿದರು. ಹೈದಾರಾಬಾದ್ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಪಂಜಾಬ್ ಪಡೆ ಅನಾಯಾಸವಾಗಿ ತಲುಪಿತು. ಕನ್ನಡಿಗರಾದ ಮಯಾಂಕ್ ಅಗರ್’ವಾಲ್, ಕೆ.ಎಲ್ ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್’ಮನ್ ಜೋಸ್ ಬಟ್ಲರ್ ಅವರನ್ನು ’ಮಂಕಡ್ ರನೌಟ್’ ಮಾಡಿದ್ದರು. ಇದು ಸಾಕಷ್ಟು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.