
ಮುಂಬೈ[ಏ.10]: ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಬುಧವಾರ ತವರಿನ ಅಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಸೆಣಸಲು ಸಜ್ಜಾಗಿದೆ. ಟೂರ್ನಿಯಲ್ಲಿ ಪಂಜಾಬ್ ಹಾಗೂ ಮುಂಬೈ 2ನೇ ಬಾರಿ ಮುಖಾಮುಖಿಯಾಗುತ್ತಿವೆ.
ಮಾ. 30ರಂದು ಮೊಹಾಲಿಯಲ್ಲಿ ಉಭಯ ತಂಡಗಳು ಸೆಣಸಿದ್ದವು. ಆ ಪಂದ್ಯದಲ್ಲಿ ಮುಂಬೈ ವಿರುದ್ಧ ಪಂಜಾಬ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಮುಂಬೈ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾತರಿಸುತ್ತಿದೆ. ಮುಂಬೈ ಹಾಗೂ ಪಂಜಾಬ್ ಕಳೆದ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಮತ್ತೊಂದು ಜಯದ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯುತ್ತಿವೆ. ಮುಂಬೈ ಸತತ 2 ಪಂದ್ಯಗಳಲ್ಲಿ ಕ್ರಮವಾಗಿ ಹಾಲಿ ಚಾಂಪಿಯನ್ ಚೆನ್ನೈ ಮತ್ತು ಹೈದರಾಬಾದ್ ವಿರುದ್ಧ ಜಯಿಸಿ ಹ್ಯಾಟ್ರಿಕ್ ಜಯವನ್ನು ಎದುರು ನೋಡುತ್ತಿದೆ. ಬಲಾಢ್ಯ ಬೌಲಿಂಗ್ ಪಡೆಯನ್ನು ಹೊಂದಿರುವ ಮುಂಬೈ, ಪಂಜಾಬ್ ಮೇಲೆ ಸವಾರಿ ಮಾಡುವ ಉತ್ಸಾಹದಲ್ಲಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಜಯಿಸಿರುವ ಪಂಜಾಬ್, ಮುಂಬೈ ಎದುರು ಇನ್ನೊಂದು ಜಯದ ವಿಶ್ವಾಸದಲ್ಲಿದೆ.
IPL 2019: ಪಂದ್ಯಕ್ಕೂ ಮೊದಲೇ ಮುಂಬೈಗೆ ಆಘಾತ- BCCI ಆಯ್ಕೆ ಸಮಿತಿಗೆ ಅತಂಕ!
ಪಿಚ್ ರಿಪೋರ್ಟ್: ವಾಂಖೇಡೆ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇಲ್ಲಿ ರನ್ ಹೊಳೆ ಹರಿಸಬಹುದಾಗಿದೆ. ಹಾಗೆ ಸ್ವಿಂಗ್ ಬೌಲರ್‌ಗಳಿಗೆ ನೆರವು ದೊರೆಯಲಿದ್ದು ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್ ಆಗಲಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 200 ರನ್ ಗಳಿಸಿದ್ದರೂ ರಕ್ಷಣೆ ಮಾಡುಕೊಳ್ಳುವುದು ಅಸಾಧ್ಯ
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್ ಶರ್ಮಾ (ನಾಯಕ), ಕ್ವಿಂಟಾನ್ ಡಿಕಾಕ್, ಸೂರ್ಯಕುಮಾರ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಕಿರನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ರಾಹುಲ್ ಚಾಹರ್, ಅಲ್ಜಾರಿ ಜೋಸೆಫ್, ಬೆಹ್ರೆನ್‌ಡೊರ್ಫ್, ಬುಮ್ರಾ.
ಪಂಜಾಬ್: ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್, ಡೇವಿಡ್ ಮಿಲ್ಲರ್, ಸ್ಯಾಮ್ ಕರ‌್ರನ್, ಸರ್ಫರಾಜ್ ಖಾನ್, ಮನ್‌ದೀಪ್ ಸಿಂಗ್, ಆರ್.ಅಶ್ವಿನ್(ನಾಯಕ), ಅಂಕಿತ್ , ಮುಜೀಬ್ ರಹಮಾನ್, ಮೊಹಮದ್ ಶಮಿ.
ಸ್ಥಳ: ಮುಂಬೈ
ಆರಂಭ: ರಾತ್ರಿ 8.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.