ಪಂಜಾಬ್‌ ಕಿಂಗ್ಸ್‌’ಗಿಂದು ರಾಜಸ್ತಾನ ಸವಾಲು

Published : Apr 16, 2019, 02:31 PM IST
ಪಂಜಾಬ್‌ ಕಿಂಗ್ಸ್‌’ಗಿಂದು ರಾಜಸ್ತಾನ ಸವಾಲು

ಸಾರಾಂಶ

’ಮಂಕಡಿಂಗ್’ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಆರ್ ಅಶ್ವಿನ್ ಹಾಗೂ ಜೋಸ್ ಬಟ್ಲರ್ ಮುಖಾಮುಖಿಯಾಗುತ್ತಿದ್ದಾರೆ. ಈ ಪಂದ್ಯ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಮೊಹಾಲಿ[ಏ.16]: ಸ್ಥಿರತೆ ಕೊರತೆ ಎದುರಿಸುತ್ತಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಐಪಿಎಲ್‌ 12ನೇ ಆವೃತ್ತಿಯಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ. ಇಲ್ಲಿ ನಡೆಯಲಿರುವ ಪಂದ್ಯ ಕಿಂಗ್ಸ್‌ ಇಲೆವೆನ್‌ ಪಾಲಿಗೆ ಬಹುಮುಖ್ಯ ಎನಿಸಿದೆ. 

ಈಗಾಗಲೇ 8 ಪಂದ್ಯಗಳಲ್ಲಿ 4 ಸೋಲುಗಳನ್ನು ಕಂಡು 5ನೇ ಸ್ಥಾನಕ್ಕೆ ಕುಸಿದಿರುವ ಪಂಜಾಬ್‌, ಪ್ಲೇ-ಆಫ್‌ಗೇರಬೇಕಿದ್ದರೆ ಉಳಿದಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇಬೇಕಿದೆ. ಪಂಜಾಬ್‌ ಬ್ಯಾಟಿಂಗ್‌ ಬಲಿಷ್ಠವಾಗಿದ್ದರೂ, ಬೌಲಿಂಗ್‌ ಪಡೆ ಸತತ ವೈಫಲ್ಯ ಕಾಣುತ್ತಿದೆ. 

ಮತ್ತೊಂದೆಡೆ ಮುಂಬೈ ವಿರುದ್ಧ ಸಾಧಿಸಿದ ಗೆಲುವು ರಾಜಸ್ಥಾನದ ಉತ್ಸಾಹ ಹೆಚ್ಚಿಸಿದೆ. ತಂಡ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. 7 ಪಂದ್ಯಗಳಲ್ಲಿ ರಾಯಲ್ಸ್‌ ಕೇವಲ 2 ಪಂದ್ಯಗಳಲ್ಲಿ ಗೆದ್ದಿದೆ.

ಸ್ಥಳ: ಮೊಹಾಲಿ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Milind Soman: ವರ್ಷ 60, ಆರು ದಿನಗಳ ಅಂತರದಲ್ಲಿ 2 ಐರನ್ಮ್ಯಾನ್! ವಯಸ್ಸು ಕೇವಲ ಸಂಖ್ಯೆ ಎಂದ ಮಿಲಿಂದ್ ಸೋಮನ್
Cricket: ಕೊಹ್ಲಿ ಜೊತೆ ಗಲಾಟೆ, ಬೂಮ್ರಾಗೆ ಸಿಕ್ಸರ್ ಬಾರಿಸಿದ್ದ ಆಸೀಸ್ ಪಂಟರ್‌ಗೆ ಭಾರತದ ವೇಗಿ ತುಷಾರ್ ದೇಶಪಾಂಡೆ ತಕ್ಕ ಶಾಸ್ತಿ!