IPL 2019: RCB ಸೋಲಿಗೆ ಮತ್ತೊಂದು ಸೇರ್ಪಡೆ- ಪ್ಲೇ ಆಫ್ ಕನಸು ಭಗ್ನ!

Published : Apr 15, 2019, 11:44 PM IST
IPL 2019: RCB ಸೋಲಿಗೆ ಮತ್ತೊಂದು ಸೇರ್ಪಡೆ- ಪ್ಲೇ ಆಫ್ ಕನಸು ಭಗ್ನ!

ಸಾರಾಂಶ

ಕಳೆದ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದ್ದ RCBಗೆ ಮತ್ತೆ ಸೋಲಿನತ್ತ ಮುಖಮಾಡಿದೆ. ಮುಂಬೈ ವಿರುದ್ಧ ಗೆಲ್ಲೋ ಪಂದ್ಯವನ್ನು RCB ಕೈಚೆಲ್ಲಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಮುಂಬೈ(ಏ.15): 12ನೇ ಆವೃತ್ತಿ ಐಪಿಎಲ್ ಟೂರ್ನಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಸರಿಹೊಂದುತ್ತಿಲ್ಲ. ಸತತ 6 ಪಂದ್ಯ ಸೋತು 7ನೇ ಪಂದ್ಯ ಗೆದ್ದುಕೊಂಡಿದ್ದ RCB ಇದೀಗ 8ನೇ ಪಂದ್ಯದಲ್ಲಿ ಮತ್ತೆ ಮುಗ್ಗರಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ RCB ಸೋಲು ಅನುಭವಿಸಿದೆ.  ಈ ಮೂಲಕ RCB ಪ್ಲೇ ಆಫ್ ಕನಸು ಬಹುತೇಕ ಕಮರಿಹೋಗಿದೆ.

RCB ನೀಡಿದ 172 ರನ್ ಟಾರ್ಗೆಟ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸವಾಲಿನ ಮೊತ್ತ ಆಗಿರಲಿಲ್ಲ. ಇದಕ್ಕೆ ತಕ್ಕಂತೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ 70 ರನ್ ಜೊತೆಯಾಟ ನೀಡಿದರು. ಮೊಯಿನ್ ಆಲಿ ಸ್ಪಿನ್ ಮೋಡಿಯಿಂದ ಆರಂಭಿಕ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು.  ರೋಹಿತ್ 28 ರನ್ ಸಿಡಿಸಿ ಔಟಾದರು. 26 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ಕ್ವಿಂಟನ್ ಡಿಕಾಕ್ 40 ರನ್ ಸಿಡಿಸಿ ಔಟಾದರು.

ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಹೋರಾಟ ನೀಡಿದರೂ ದೊಡ್ಡ ಮೊತ್ತ ಕಲೆಹಾಕಲಿಲ್ಲ. ಕಿಶನ್ 21 ರನ್ ಸಿಡಿಸಿ ಔಟಾದರೆ, ಸೂರ್ಯಕುಮಾರ್ 29 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ 11 ರನ್ ಸಿಡಿಸಿ ಔಟಾದರು. ಹೀಗಾಗಿ ಮುಂಬೈಗೆ ಅಂತಿಮ 12 ಎಸೆತದಲ್ಲಿ 22 ರನ್ ಬೇಕಿತ್ತು. 

ಪವನ್ ನೇಗಿ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ 2  ಸಿಕ್ಸ್ ಹಾಗೂ 2 ಬೌಂಡರಿ ಬಾರಿಸಿ ಇನ್ನೂ ಒಂದು ಓವರ್ ಬಾಕಿ ಇರುವಂತೆ ಮುಂಬೈಗೆ 5 ವಿಕೆಟ್ ಗೆಲುವು ತಂದುಕೊಟ್ಟರು. ಪಾಂಡ್ಯ ಕೇವಲ 16 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ನಿಂದ ಅಜೇಯ 37 ರನ್ ಸಿಡಿಸಿದರು. ಮುಂಬೈ ಮತ್ತೆ ಗೆಲುವಿನ ಹಳಿಗೆ ಮರಳಿದರೆ, ಇತ್ತ RCBಗೆ ಮತ್ತೆ ಸೋಲೇ ಗತಿಯಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!