
ಢಾಕಾ[ಏ.16]: 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಬೌಲರ್ ಮೊಶ್ರಾಫೆ ಮೊರ್ತಾಜಾ ತಂಡವನ್ನು ಮುನ್ನಡೆಸಲಿದ್ದು, ಆಲ್ರೌಂಡರ್ ಶಕೀಬ್ ಅಲ್ ಹಸನ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್
ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದ್ದಿದ್ದ ಶಕೀಬ್ ತಂಡ ಕೂಡಿಕೊಂಡಿದ್ದು, ಆಲ್ರೌಂಡರ್ ವಿಭಾಗದಲ್ಲಿ ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಇನ್ನು ಅನನುಭವಿ ಅಬು ಜಾಯೆದ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
25 ವರ್ಷದ ಜಾಯೆದ್ ಜತೆಗೆ ಲಿಟನ್ ದಾಸ್, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಸೌಮ್ಯ ಸರ್ಕಾರ್ ಸೇರಿದಂತೆ ಇನ್ನು ಕೆಲವು ಯುವ ಆಟಗಾರರ ಜತೆಗೆ ತಮೀಮ್ ಇಕ್ಬಾಲ್, ಮುಷ್ಫೀಕರ್ ರಹೀಮ್ ಮೊರ್ತಾಜಾ, ಶಕೀಬ್ ಮುಂತಾದ ಅನುಭವಿ ಆಟಗಾರರನ್ನು ಬಾಂಗ್ಲಾದೇಶ ತಂಡ ಒಳಗೊಂಡಿದೆ.
ವೇಗಿ ಜಾಯೆದ್ ಟೆಸ್ಟ್ ತಂಡವನ್ನು 2018ರಲ್ಲಿ ಪ್ರತಿನಿಧಿಸಿದ್ದರೂ ಏಕದಿನ ತಂಡಕ್ಕೆ ಇದುವರೆಗೂ ಪದಾರ್ಪಣೆ ಮಾಡಿಲ್ಲ. ಜೂನ್ 02ರಂದು ಬಾಂಗ್ಲಾದೇಶವು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ವಿಶ್ವಕಪ್’ಗೆ ಬಾಂಗ್ಲಾದೇಶ ತಂಡ ಹೀಗಿದೆ:
ಮೊಶ್ರಾಫೆ ಮೊರ್ತಾಜಾ[ನಾಯಕ], ತಮೀಮ್ ಇಕ್ಬಾಲ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ಮುಷ್ಫೀಕರ್ ರಹೀಮ್[ವಿಕೆಟ್’ಕೀಪರ್], ಮೊಹಮ್ಮದುಲ್ಲಾ, ಶಕೀಬ್ ಅಲ್ ಹಸನ್[ಉಪನಾಯಕ], ಮೊಹಮ್ಮದ್ ಮಿಥುನ್, ಶಬ್ಬೀರ್ ರೆಹಮಾನ್, ಮೊಸಾದ್ದೀಕ್ ಹುಸೇನ್, ಮೊಹಮ್ಮದ್ ಸೈಫುದ್ದೀನ್, ಮೆಹಾದಿ ಹಸನ್ ಮಿರಾಜ್, ರುಬೆಲ್ ಹಸನ್, ಮುಷ್ತಾಫಿಜುರ್ ರೆಹಮಾನ್, ಅಬು ಜಾಯೆದ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.