ಬೆಂಗ್ಳೂರು ಗ್ರ್ಯಾಂಡ್‌ ಮಾಸ್ಟರ್ಸ್‌ ಓಪನ್‌ ಚೆಸ್‌ ಟೂರ್ನಿಗೆ ಚಾಲನೆ

ಬೆಂಗಳೂರು ಜಿಲ್ಲಾ ಚೆಸ್‌ ಸಂಸ್ಥೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಸಿಸುತ್ತಿರುವ ಚೊಚ್ಚಲ ಬೆಂಗಳೂರು ಅಂತಾರಾಷ್ಟ್ರೀಯ ಚೆಸ್‌ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಟೂರ್ನಿಯು ಮುಂಬರುವ ದಿನಗಳಲ್ಲಿ ಭಾರತದಲ್ಲೇ ದೊಡ್ಡ ಮಟ್ಟದ ಪಂದ್ಯಾವಳಿಯಾಗಲಿದೆ ಎಂದರು.


ಬೆಂಗಳೂರು(ಜ.19): ಕರ್ನಾಟಕದ ಈಗ ಹಲವು ಗ್ರ್ಯಾಂಡ್‌ ಮಾಸ್ಟರ್ಸ್‌ಗಳನ್ನು ಹೊಂದಿದ್ದು, ಅದರ ಸಂಖ್ಯೆ ಏರಿಕೆಯಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ ಮಾಸ್ಟರ್ಸ್‌ ಟೂರ್ನಿಯು ಮತ್ತಷ್ಟು ಜನರಿಗೆ ಚೆಸ್‌ನತ್ತ ಬರಲು ಪ್ರೇರಣೆಯಾಗಲಿದೆ ಎಂದು ದಿಗ್ಗಜ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಹೇಳಿದರು.

ಬೆಂಗಳೂರು ಜಿಲ್ಲಾ ಚೆಸ್‌ ಸಂಸ್ಥೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಸಿಸುತ್ತಿರುವ ಚೊಚ್ಚಲ ಬೆಂಗಳೂರು ಅಂತಾರಾಷ್ಟ್ರೀಯ ಚೆಸ್‌ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಟೂರ್ನಿಯು ಮುಂಬರುವ ದಿನಗಳಲ್ಲಿ ಭಾರತದಲ್ಲೇ ದೊಡ್ಡ ಮಟ್ಟದ ಪಂದ್ಯಾವಳಿಯಾಗಲಿದೆ ಎಂದರು.

Latest Videos

Australian Open 2024: ಸುಮಿತ್‌ ನಗಾಲ್‌ ಗೆಲುವಿನ ಓಟಕ್ಕೆ ಬ್ರೇಕ್‌

ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕ್ರೀಡಾ ಸಚಿವ ಬಿ.ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್‌, ಕ್ರೀಡಾ ಇಲಾಖೆ ಆಯುಕ್ತ ಶಶಿಕುಮಾರ್‌, ಅಖಿಲ ಭಾರತ ಚೆಸ್‌ ಫೆಡರೇಶನ್‌ ಕಾರ್ಯದರ್ಶಿ ಎ.ಕೆ.ವರ್ಮಾ, ಕೆಎಸ್‌ಸಿಎ ಅಧ್ಯಕ್ಷ ಡಿ.ಪಿ.ಅನಂತ, ಬಿಯುಡಿಸಿಎ ಅಧ್ಯಕ್ಷೆ ಸೌಮ್ಯಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಅವರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 1ನೇ ಬೆಂಗಳೂರು ಅಂತರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. pic.twitter.com/H4nQB9G1Vy

— CM of Karnataka (@CMofKarnataka)

9 ದಿನಗಳ ಟೂರ್ನಿ

ಜ.26ರ ವರೆಗೆ ಟೂರ್ನಿ ನಡೆಯಲಿದ್ದು, 3 ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಗೊಳ್ಳಲಿವೆ. ಭಾರತ ಸೇರಿದಂತೆ 20 ದೇಶಗಳ 2000ಕ್ಕೂ ಹೆಚ್ಚು ಆಟಗಾರರು ಹಾಗೂ 40ಕ್ಕೂ ಹೆಚ್ಚು ಗ್ರ್ಯಾಂಡ್‌ ಮಾಸ್ಟರ್ಸ್‌ಗಳು ಭಾಗಿಯಾಗಲಿದ್ದಾರೆ.

ಆನಂದ್ ಜೊತೆ ಚೆಸ್‌ ಆಡಿದ ಸಿದ್ದು

ಸಮಾರಂಭಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಬಳಿಕ ವಿಶ್ವನಾಥನ್‌ ಆನಂದ್‌ ಜೊತೆ ಕೆಲ ಕಾಲ ಚೆಸ್‌ ಆಡಿದರು. ಬಳಿಕ ವೇದಿಕೆಗೆ ಬಂದ ಅವರು ದೀಪ ಹಚ್ಚುವ ಮೂಲಕ ಕೂಟಕ್ಕೆ ಅಧಿಕೃತ ಚಾಲನೆ ನೀಡಿದರೆ, ವಿಶ್ವನಾಥನ್‌ ಆನಂದ್‌ ಗಂಟೆ ಬಾರಿಸಿ, ಚೆಸ್‌ ಬೋರ್ಡ್‌ ಆಕಾರದ ಕೇಕ್‌ ಕತ್ತರಿಸಿದರು. ಡಾ.ಕೆ.ಗೋವಿಂದರಾಜು ಕೂಡಾ ಜೊತೆಗಿದ್ದರು.

ಕರ್ನಾಟಕ vs ಗೋವಾ ರಣಜಿ ಫೈಟ್‌ ಇಂದಿನಿಂದ

ಬೆಂಗಳೂರು ಟೆನಿಸ್‌: ಋುತುಜಾ ಕ್ವಾರ್ಟರ್‌ಗೆ

ಬೆಂಗಳೂರು: ಬೆಂಗಳೂರು ಓಪನ್‌ ಮಹಿಳಾ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಮುಖ್ಯ ಸುತ್ತು ತಲುಪಿದ್ದ ಭಾರತದ ಐವರಲ್ಲಿ ಋುತುಜಾ ಭೋಸಲೆ ಮಾತ್ರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದವರೇ ಆದ ಅಂಕಿತ ರೈನಾ ವಿರುದ್ಧ ಭೋಸಲೆ ಆಡಬೇಕಿತ್ತು. ಆದರೆ ಅನಾರೋಗ್ಯದಿಂದ ಅಂಕಿತಾ ಪಂದ್ಯದಿಂದ ನಿವೃತ್ತಿಯಾದ ಕಾರಣ ಋುತುಜಾ ಮುಂದಿನ ಹಂತಕ್ಕೆ ಮುನ್ನಡೆದರು. ವೈದೇಹಿ ಚೌಧರಿ ಅವರು ಫ್ರಾನ್ಸ್‌ನ ಕ್ಯಾರೊಲೆ ಮ್ಯಾನೆಟ್‌ ವಿರುದ್ಧ 7-6(5), 4-6, 4-6 ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಡಬಲ್ಸ್‌ನಲ್ಲಿ ಶರ್ಮದಾ ಬಾಲು- ಶ್ರಾವ್ಯಾ ಶಿವಾನಿ ಹಾಗೂ ವೈದೇಹಿ ಚೌಧರಿ-ಶ್ರೀವಲ್ಲಿ ರಶ್ಮಿಕಾ ಜೋಡಿ ಕೂಡಾ ಸೋಲನುಭವಿಸಿ ಟೂರ್ನಿಯಲ್ಲಿ ತಮ್ಮ ಅಭಿಯಾನ ಕೊನೆಗೊಳಿಸಿದ್ದಾರೆ.
 

click me!