ಇಂಡೋ-ಆಫ್ಘಾನ್ ಟೆಸ್ಟ್: ಬೌಂಡರಿಗಳ ಸುರಿಮಳೆಯೊಂದಿಗೆ ಧವನ್ ಶತಕ

First Published Jun 14, 2018, 12:15 PM IST
Highlights

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಆರಂಭವಾಗಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಆಫ್ಘಾನಿಸ್ತಾನದ ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಭಾರತದ ಆರಂಭಿಕ ಜೋಡಿ ಅಜೇಯ ಶತಕದ ಜತೆಯಾಟವಾಡಿತು.

ಬೆಂಗಳೂರು[ಜೂ.14]: ಭಾರತ-ಆಫ್ಘಾನಿಸ್ತಾನ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆದಿದೆ. ಆರಂಭಿಕ ಶಿಖರ್ ಧವನ್ ಹಾಗೂ ಮರುಳಿ ವಿಜಯ್ ಮೊದಲ ದಿನದ ಊಟದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 158 ರನ್ ಕಲೆಹಾಕಿದೆ. ಈ ಮೂಲಕ ಮೊದಲ ದಿನವೇ ರಹಾನೆ ಪಡೆ ಆಫ್ಘಾನ್ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಆರಂಭವಾಗಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಆಫ್ಘಾನಿಸ್ತಾನದ ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಭಾರತದ ಆರಂಭಿಕ ಜೋಡಿ ಅಜೇಯ ಶತಕದ ಜತೆಯಾಟವಾಡಿತು. ಧವನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರೆ, ಮುರಳಿ ವಿಜಯ್ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಧವನ್ 91 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 104 ರನ್ ಬಾರಿಸಿದ್ದಾರೆ. ಬೌಂಡರಿ ಮೂಲಕ ಭರ್ಜರಿ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ 7ನೇ ಶತಕ ದಾಖಲಿಸಿದರು.  ಇದರಲ್ಲಿ 98 ರನ್’ಗಳನ್ನು ಬೌಂಡರಿಗಳ ಮೂಲಕವೇ ಪೂರೈಸಿರುವುದು ವಿಶೇಷ. ಇನ್ನು ವಿಜಯ್ 72 ಎಸೆತಗಳಲ್ಲಿ 41 ರನ್ ಬಾರಿಸಿ ಧವನ್’ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

ಆಫ್ಘಾನ್’ನ ಯಾವೊಬ್ಬ ಬೌಲರ್ ಕೂಡಾ ಊಟದ ವಿರಾಮದ ವೇಳೆಯವರೆಗೆ ಯಶಸ್ಸು ಕಾಣಲಿಲ್ಲ. ಸ್ಪಿನ್ ಅಸ್ತ್ರಗಳಾದ ಮುಜೀಬ್ 8ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರೆ, ರಶೀದ್ ಖಾನ್ 7 ಓವರ್’ಗಳಲ್ಲಿ 51 ರನ್ ನೀಡಿ ದುಬಾರಿ ಎನಿಸಿದ್ದಾರೆ.
 

click me!