ಡೇವಿಸ್ ಕಪ್ ಟೂರ್ನಿಯಲ್ಲಿ ಸ್ವೀಡನ್ ಎದುರು ಭಾರತ ತಂಡ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಸಮಿತ್ ನಗಾಲ್ ಮೇಲೆ ಖಿಲ ಭಾರತ ಟೆನಿಸ್ ಸಂಸ್ಥೆ ಗಂಭೀರ ಆರೋಪ ಮಾಡಿದೆ
ನವದೆಹಲಿ: ಕಳೆದವಾರ ಸ್ವೀಡನ್ ವಿರುದ್ಧನಡೆದ ಡೇವಿಸ್ ಕಪ್ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತದ ಅಗ್ರ ಸಿಂಗಲ್ ಆಟಗಾರ ಸುಮಿತ್ ನಗಾಲ್ ಉದ್ದೇಶಪೂರ್ವ ಕವಾಗಿ ಆಡಲಿಲ್ಲ ಎನಿಸುತ್ತದೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಚ್ಚರಿಯ ಹೇಳಿಕೆಯನ್ನುನೀಡಿದೆ.
ಸ್ವೀಡನ್ ವಿರುದ್ಧ 0-4ರ ಹೀನಾಯ ಸೋಲು ಅನುಭವಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್ ಧೂಪರ್, 'ನಗಾಲ್ ಹಾಗೂ ಯೂಕಿ ಭಾಂಬ್ರಿ ಆಡಿದ್ದರೆ ಸುಧಾರಿತ ಫಲಿತಾಂಶ ನಿರೀಕ್ಷಿಸಬಹುದಿತ್ತು. ತಂಡದಲ್ಲಿ ಇದ್ದಿದ್ದು ಕೇವಲ ಒಬ್ಬ ತಜ್ಞ ಸಿಂಗಲ್ಸ್ ಆಟಗಾರ, ನಗಾಲ್ ಬೆನ್ನು ನೋವಿನ ಕಾರಣ ನೀಡಿ ಡೇವಿಸ್ ಕಪ್‌ನಿಂದ ಹಿಂದೆ ಸರಿದರು. ಆದರೆ ಈಗ ಚೀನಾದಲ್ಲಿ ಎಟಿಪಿ ಟೂರ್ನಿ ಆಡುತ್ತಿದ್ದಾರೆ. ಯೂಕಿ ತಮ್ಮ ಗೈರು ಹಾಜರಿಗೆ ಸೂಕ್ತ ಕಾರಣ ನೀಡಿಲ್ಲ' ಎಂದಿದ್ದಾರೆ.
undefined
ರಾಹುಲ್ ದ್ರಾವಿಡ್‌ರ ಕೋಚಿಂಗ್ ಶೈಲಿಗೂ ಗೌತಮ್ ಗಂಭೀರ್‌ರ ಕೋಚಿಂಗ್ ಶೈಲಿಗೂ ವ್ಯತ್ಯಾಸವಿದೆ.: ರೋಹಿತ್ ಶರ್ಮಾ
ಸ್ವೀಡನ್ ವಿರುದ್ಧ ಭಾರತ ಸೋತ ಬಳಿಕ, ನಗಾಲ್ ಸೇರಿ ದಂತೆ ಕೆಲ ಹಾಲಿ ಹಾಗೂ ಮಾಜಿ ಆಟಗಾರರು ಎಐಟಿಎ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದರು. ಈ ಕುರಿತೂ ಪ್ರತಿಕ್ರಿಯಿಸಿರುವ ಧೂಪ, 'ಡೇವಿಸ್ ಕಪ್ ನಲ್ಲಿ ಆಡುವಂತೆ ಎಲ್ಲ ಅಗ್ರ ಆಟಗಾರರಿಗೂ ನಾಯಕ ಹಾಗೂ ಆಡಳಿತ ಮಂಡಳಿ ಪ್ರತ್ಯೇಕವಾಗಿ ಕರೆ ಮಾಡಿ ಕೇಳಲಾಗಿತ್ತು. ಆದರೆ ಎಲ್ಲರೂ ನಿರಾಕರಿಸಿದರು' ಎಂದು ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ.
ಇದೇ ವೇಳೆ ಎಐಟಿಎ ಈ ವಿಚಾರವಾಗಿ ಟ್ವಿಟ್ ಸಹ ಮಾಡಿದ್ದು, 'ಡೇವಿಸ್ ಕಪ್ ಕೇವಲ ಒಂದು ಟೆನಿಸ್ ಟೂರ್ನಿಯಲ್ಲ. ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಸಿಗುವ ಅವಕಾಶವದು. ಆಟಗಾರರು ಆ ಅವಕಾಶವನ್ನು ಗೌರವಿಸಬೇಕು' ಎಂದಿದೆ.
ಎಫ್‌ಐಎಚ್ ವಾರ್ಷಿಕ ಪ್ರಶಸ್ತಿ ರೇಸಲ್ಲಿ ಹರ್ಮನ್, ಶ್ರೀಜೇಶ್
ಲುಸ್ಸಾನೆ (ಸ್ವಿಟ್ಜರ್‌ಲೆಂಡ್): ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಇತ್ತೀಚೆಗೆ ನಿವೃತ್ತಿ ಪಡೆದ ಪಿ.ಆರ್.ಶ್ರೀಜೇಶ್, ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್)ನ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಹರ್ಮನ್‌ಪ್ರೀತ್ ಹಾಗೂ ವರ್ಷದ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಗೆ ಶ್ರೀಜೇಶ್‌ರ ಹೆಸರ ನಾಮನಿರ್ದೇಶನಗೊಂಡಿದೆ. ಈ ಇಬ್ಬರೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಮಹಿಳಾ ಟಿ20 ವಿಶ್ವಕಪ್ ವಿಜೇತರಿಗೆ ಬಂಪರ್ ನಗದು ಬಹುಮಾನ ಘೋಷಿಸಿದ ಐಸಿಸಿ! ಕಳೆದ ಆವೃತ್ತಿಗಿಂತ 225% ಹೆಚ್ಚಳ
ಚೆಸ್ ಒಲಿಂಪಿಯಾಡ್: ಭಾರತಕ್ಕೆ 6ನೇ ಜಯ
ಬುಡಾಪೆಸ್ಟ್: 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ತಂಡಗಳು ತಮ್ಮ ಅಭೂತಪೂರ್ವ ಲಯವನ್ನು ಮುಂದುವರಿಸಿದ್ದು, 6ನೇ ಸುತ್ತಿನಲ್ಲೂ ಗೆಲುವು ದಾಖಲಿಸಿವೆ. ಭಾರತ ಪುರುಷರ ತಂಡ ಆತಿಥೇಯ ಹಂಗೇರಿ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿದರೆ, ಮಹಿಳಾ ತಂಡ ಅರ್ಮೇನಿಯಾ ವಿರುದ್ಧ 2.5.1.5ರಲ್ಲಿ ಜಯ ದಾಖಲಿಸಿತು. ಎರಡೂ ತಂಡಗಳು ತಮ್ಮ ತಮ್ಮ ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿವೆ.