ತಾಯಿಯಾದ ಬಳಿಕ ಸಾನಿಯಾ ಮಿರ್ಜಾ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದು, ಈಗ ಕಳೆದ 4 ತಿಂಗಳಲ್ಲಿ 26 ಕೆ.ಜಿ ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಹೈದರಾಬಾದ್[ಸೆ.26]: ಭಾರತದ ಟೆನಿಸ್ ತಾರೆ ಸಾನಿಯಾ ಮಿಜಾ ವೃತ್ತಿಪರ ಟೆನಿಸ್‌ಗೆ ಮರಳಲು ಸಿದ್ಧತೆ ನಡೆಸುತ್ತಿದ್ದು, ಕಳೆದ 4 ತಿಂಗಳಲ್ಲಿ 26 ಕೆ.ಜಿ ತೂಕ ಇಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
"ನೀವೂ ಕೂಡ ತಾಯಿಯ ಗರ್ಭದಿಂದ ಹೊರಬಂದಿದ್ದೀರಿ"-ಸಾನಿಯಾ ತಿರುಗೇಟು!
A post shared by Sania Mirza (@mirzasaniar) on Sep 24, 2019 at 1:23am PDT
Inspired by Super (WO)Man 😏 Ps- that hurt too 🙄 #thatburnthough #mummahustles
A post shared by Sania Mirza (@mirzasaniar) on Feb 8, 2019 at 3:48am PST
ಇನ್‌ಸ್ಟಾಗ್ರಾಂನಲ್ಲಿ ತಾವು ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಹಾಕಿರುವ ಸಾನಿಯಾ, ‘ನಾನು ಗರ್ಭಿಣಿಯಾಗಿದ್ದ ವೇಳೆ ನನ್ನ ದೇಹ ತೂಕ 23 ಕೆ.ಜಿ ಹೆಚ್ಚಾಗಿತ್ತು. ಈಗ ಕಳೆದ 4 ತಿಂಗಳಲ್ಲಿ 26 ಕೆ.ಜಿ ಇಳಿಸಿಕೊಂಡಿದ್ದೇನೆ. ಕಠಿಣ ಪರಿಶ್ರಮ, ಶ್ರದ್ಧೆ, ಶಿಸ್ತಿನಿಂದ ಏನು ಬೇಕಿದ್ದರೂ ಸಾಧ್ಯ’ ಎಂದು ಅವರು ಬರೆದಿದ್ದಾರೆ.
ಸಾನಿಯಾ ತಂಗಿ ಜೊತೆ ಅಜರ್ ಮಗನ ಮದುವೆ: ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ!
ಸಾನಿಯಾ ಮಿರ್ಜಾ ಏಪ್ರಿಲ್ 12, 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದರು. ಎಂಟು ವರ್ಷಗಳ ಬಳಿಕ ಕಳೆದ ಅಕ್ಟೋಬರ್ ನಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಇಜಾನ್ ಎಂದು ಹೆಸರಿಡಲಾಗಿದೆ. ಇದೀಗ ಸಾನಿಯಾ ವೃತ್ತಿಜೀವನಕ್ಕೆ ಮರಳಲು ಸಾಕಷ್ಟು ಬೆವರು ಹರಿಸುತ್ತಿದ್ದು, ಮುಂಬರುವ ಜನವರಿ ವೇಳೆಗೆ ಟೆನಿಸ್ ಕೋರ್ಟ್’ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.