ಪಾಕ್‌ಗೆ ಹೋಗಲ್ಲ: ಭಾರತೀಯ ಟೆನಿಸಿಗರು!

By Kannadaprabha News  |  First Published Aug 14, 2019, 11:49 AM IST

ಡೇವಿಸ್ ಕಪ್ ಟೂರ್ನಿಯನ್ನು ಪಾಕಿಸ್ತಾನ ಬಿಟ್ಟು ತಟಸ್ಥ ಸ್ಥಳದಲ್ಲಿ ನಡೆಸುವಂತೆ ಭಾರತೀಯ ಟೆನಿಸ್ ಆಟಗಾರರು ಆಗ್ರಹಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ(ಆ.14): ಭಾರತ ಡೇವಿಸ್‌ ಕಪ್‌ ತಂಡ, ಪಾಕಿಸ್ತಾನ ವಿರುದ್ಧ ಮುಂದಿನ ತಿಂಗಳು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿರುವ ಏಷ್ಯಾ/ಓಷಿಯಾನಿಯಾ ಗುಂಪು 1 ಪಂದ್ಯವನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ)ಗೆ ಮನವಿ ಸಲ್ಲಿಸಿದೆ.

ಡೇವಿಸ್‌ ಕಪ್‌: ಪಾಕ್‌ಗೆ ತೆರಳಲಿರುವ ಭಾರತ ತಂಡ?

Tap to resize

Latest Videos

undefined

ರಾಜಕೀಯ ಉದ್ವಿಗ್ನತೆ ನಡುವೆಯೂ ಎಐಟಿಎ ಕೇವಲ ಭದ್ರತಾ ವ್ಯವಸ್ಥೆ ಪುನರ್‌ ಪರಿಶೀಲನೆಗಷ್ಟೇ ಮನವಿ ಮಾಡಿದ್ದಕ್ಕೆ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ನಾಯಕ ಮಹೇಶ್‌ ಭೂಪತಿ, ‘ನಾವು ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ. 

ಡೇವಿಸ್‌ ಕಪ್‌: ಭಾರತದ ಪಾಕ್‌ ಪ್ರವಾಸ ರದ್ದು?

ಸೋಮವಾರ ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರಣ್ಮೋಯ್‌ ಚಟ್ಟರ್ಜಿ, ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸುವಂತೆ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌)ಗೆ ಮನವಿ ಮಾಡಿದ್ದರು. ಮಂಗಳವಾರ ಐಟಿಎಫ್‌, ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ (ಪಿಟಿಎಫ್‌) ಕೈಗೊಂಡಿರುವ ಭದ್ರತಾ ವ್ಯವಸ್ಥೆ ಸಮಾಧಾನ ತಂದಿದೆ ಎಂದಿದೆ.
 

click me!