ಕೊಹ್ಲಿ ಪಡೆ ವ್ಯವಸ್ಥಾಪಕನಿಗೆ BCCI ಛೀಮಾರಿ!

By Kannadaprabha News  |  First Published Aug 14, 2019, 10:58 AM IST

ಟೀಂ ಇಂಡಿಯಾ ಮ್ಯಾನೇಜರ್ ಅನುಚಿತವಾಗಿ ವರ್ತಿಸಿದ್ದಕ್ಕೆ ಬಿಸಿಸಿಐನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಷ್ಟಕ್ಕೂ ಮ್ಯಾನೇಜರ್ ಮಾಡಿದ್ದಾದರೂ ಏನು..? ನೀವೇ ನೋಡಿ...


ನವ​ದೆ​ಹ​ಲಿ(ಆ.14): ಭಾರತ ಕ್ರಿಕೆಟ್‌ ತಂಡದ ವ್ಯವಸ್ಥಾಪಕ ಸುನಿಲ್‌ ಸುಬ್ರಮಣ್ಯಂ ವಿವಾದ ಸೃಷ್ಟಿಸಿ ಬಿಸಿಸಿಐನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. 

ಇಂಡೋ-ವಿಂಡೀಸ್ ಫೈಟ್: ಸರಣಿ ಜಯದ ಮೇಲೆ ಕಣ್ಣಿಟ್ಟ ಭಾರತ

Tap to resize

Latest Videos

ವಿಂಡೀಸ್‌ ಪ್ರವಾಸದಲ್ಲಿರುವ ಭಾರತ ತಂಡದೊಂದಿಗಿರುವ ಅವರು, ಟ್ರಿನಿಡಾಡ್‌ ಹಾಗೂ ಟೊಬೇಗೋಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾ​ರದ ಮಾರ್ಗ​ಸೂಚಿ ಅನು​ಸ​ರಿಸಿ ಭಾರತ ತಂಡ ಜಲ ಸಂರ​ಕ್ಷಣೆ ಕುರಿ​ತು ಸಣ್ಣ ಜಾಹೀ​ರಾತು ಚಿತ್ರೀ​ಕ​ರಿ​ಸಬೇಕಿ​ತ್ತು. ಆಟಗಾರರ ವೇಳಾಪಟ್ಟಿ ನೋಡಿಕೊಂಡು ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲು ಸುನಿಲ್‌ರನ್ನು ಸಂಪರ್ಕಿಸುವಂತೆ ಅಲ್ಲಿನ ರಾಯಭಾರ ಕಚೇರಿಗೆ ಬಿಸಿಸಿಐ ತಿಳಿಸಿತ್ತು. 

ಅದ್ಭುತ ಆವಿಷ್ಕಾರ: ಕ್ರಿಕೆಟ್‌ನಲ್ಲಿ ಶೀಘ್ರ ಸ್ಮಾರ್ಟ್‌ಬಾಲ್‌ ಬಳಕೆ!

ಆದರೆ ಅಧಿಕಾರಿಗಳು ಕರೆ ಮಾಡಿದಾಗ ಸ್ವೀಕರಿಸದ ಸುನಿಲ್‌, ‘ಸಂದೇಶಗಳ ಪ್ರವಾಹ ಹರಿಸಬೇಡಿ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಈ ವರ್ತನೆ ಬಿಸಿಸಿಐಗೆ ಸಿಟ್ಟು ತರಿಸಿದೆ. ವಿಂಡೀಸ್‌ ಪ್ರವಾಸದ ಬಳಿಕ ಸುನಿಲ್‌ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದ್ದು, ಅವರು ತಂಡದೊಂದಿಗೆ ಮುಂದುವರಿಯುವ ಸಾಧ್ಯತೆ ಕಡಿಮೆ.
 

click me!