ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶೂಟರ್‌ ಮನು ಭಾಕರ್‌

By Kannadaprabha News  |  First Published Oct 29, 2023, 11:52 AM IST

ಮನು ಭಾಕರ್ ಪ್ಯಾರಿಸ್‌ ಗೇಮ್ಸ್‌ಗೆ ಅರ್ಹತೆ ಪಡೆದ ದೇಶದ 11ನೇ ಶೂಟರ್‌ ಎನ್ನುವ ಹಿರಿಮೆಗೆ ಮನು ಪಾತ್ರರಾಗಿದ್ದಾರೆ. ಇದೇ ವೇಳೆ ಶನಿವಾರ ಭಾರತ ಮತ್ತೆ 4 ಪದಕಗಳನ್ನು ಜಯಿಸಿತು.


ಚಾಂಗ್‌ವೊನ್‌(ದ.ಕೊರಿಯಾ): ಭಾರತದ ತಾರಾ ಶೂಟರ್‌ ಮನು ಭಾಕರ್‌ ಇಲ್ಲಿ ನಡೆಯುತ್ತಿರುವ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದು, 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಪ್ಯಾರಿಸ್‌ ಗೇಮ್ಸ್‌ಗೆ ಅರ್ಹತೆ ಪಡೆದ ದೇಶದ 11ನೇ ಶೂಟರ್‌ ಎನ್ನುವ ಹಿರಿಮೆಗೆ ಮನು ಪಾತ್ರರಾಗಿದ್ದಾರೆ. ಇದೇ ವೇಳೆ ಶನಿವಾರ ಭಾರತ ಮತ್ತೆ 4 ಪದಕಗಳನ್ನು ಜಯಿಸಿತು.

ದಾವಣಗೆರೆ ಓಪನ್‌ ಟೆನಿಸ್‌: ರಾಮ್‌, ನಿಕಿಗೆ ಸೋಲು

Tap to resize

Latest Videos

undefined

ದಾವಣಗೆರೆ: ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ನಿಕಿ ಪೂಣಚ್ಚ ಇಲ್ಲಿ ನಡೆಯುತ್ತಿರುವ ದಾವಣಗೆರೆ ಓಪನ್‌ ಐಟಿಎಫ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ. ಅಮೆರಿಕದ ನಿಕ್‌ ಚಾಪೆಲ್‌ ವಿರುದ್ಧ ನಿಕಿ 3-6, 2-6ರಲ್ಲಿ ಸೋತರೆ, ಸರ್ಬಿಯಾದ ಬೋಗ್ಡನ್‌ ವಿರುದ್ಧ ರಾಮ್‌ 4-6, 6-7ರಲ್ಲಿ ಪರಾಭವಗೊಂಡರು. ಡಬಲ್ಸ್‌ ಫೈನಲಲ್ಲಿ ಸಿದ್ಧಾಂತ್‌ ಹಾಗೂ ವಿಷ್ಣುವರ್ಧನ್‌ 6-2, 7-5 ಸೆಟ್‌ಗಳಲ್ಲಿ ಕಾರ್ತಿಕ್‌-ಮನೀಶ್‌ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

Asian Para Games 2023: ಭಾರತಕ್ಕೆ ಐತಿಹಾಸಿಕ 111 ಪದಕ

ಜೋಹರ್‌ ಕಪ್‌ ಹಾಕಿ: ಭಾರತಕ್ಕೆ 3-1ರ ಜಯ

ಜೋಹರ್‌ ಬಹ್ರು: ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ಮೊದಲ ಜಯ ಸಾಧಿಸಿದೆ. ಶನಿವಾರ ಆತಿಥೇಯ ಮಲೇಷ್ಯಾ ವಿರುದ್ಧ 3-1 ಗೋಲುಗಳಲ್ಲಿ ಜಯಿಸಿತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 3-3ರ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ಗುಂಪು ಹಂತದ ತನ್ನ 3ನೇ ಹಾಗೂ ಕೊನೆಯ ಪಂದ್ಯವನ್ನು ಅ.30ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

ಕರ್ಮ ರಿಟರ್ನ್ಸ್‌..! ಗಂಗೂಲಿ ಬದುಕಿನಲ್ಲಿ ಆಟವಾಡಿದ್ದ ಕೋಚ್ ಗ್ರೆಗ್ ಚಾಪೆಲ್ ಪಾಡು ಕೇಳೋರೆ ಗತಿಯಿಲ್ಲ..!

ರಾಷ್ಟ್ರೀಯ ಗೇಮ್ಸ್‌: ಮತ್ತೆ ನಾಲ್ಕು ಪದಕ ಗೆದ್ದ ರಾಜ್ಯ

ಗೋವಾ: 37ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ ಮತ್ತೆ 3 ಪದಕ ಗೆದ್ದಿದೆ. ಶನಿವಾರ ಮಹಿಳೆಯರ ವೇಟ್‌ಲಿಫ್ಟಿಂಗ್‌ 87 ಕೆ.ಜಿ. ವಿಭಾಗದಲ್ಲಿ ಬಿ.ಎನ್‌.ಉಷಾ ಒಟ್ಟು 203 ಕೆ.ಜಿ. (ಸ್ನ್ಯಾಚ್‌ನಲ್ಲಿ 95 ಕೆ.ಜಿ., ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 108 ಕೆ.ಜಿ.) ತೂಕ ಎತ್ತಿ ಬೆಳ್ಳಿ ಪದಕ ಪಡೆದರು. ಮಹಿಳೆಯರ ಬಾಸ್ಕೆಟ್‌ಬಾಲ್‌ 5X5ನ ಫೈನಲ್‌ನಲ್ಲಿ ರಾಜ್ಯ ತಂಡ ಕೇರಳ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರೆ, ಪುರುಷರ ನೆಟ್‌ಬಾಲ್‌ನಲ್ಲಿ ರಾಜ್ಯ ತಂಡಕ್ಕೆ ಕಂಚು ದೊರೆಯಿತು. ಪುರುಷರ ಜಿಮ್ನಾಸ್ಟಿಕ್ಸ್‌ನಲ್ಲಿ ಉಜ್ವಲ್‌ ನಾಯ್ಡು ಕಂಚು ಪಡೆದರು. ಕರ್ನಾಟಕ ಒಟ್ಟು 13 ಪದಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
 

click me!