AFC ಕಪ್ ಸೋಲು- ಭಾರತ ಕೋಚ್ ರಾಜೀನಾಮೆ

By Web DeskFirst Published Jan 16, 2019, 9:34 AM IST
Highlights

ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿ ಸೋಲಿನ ಬೆನ್ನಲ್ಲೇ ಭಾರತ ಫುಟ್ಬಾಲ್ ತಂಡಕ್ಕೆ ಮತ್ತೊಂದು ಆಘಾತ ಎದುುರಾಗಿದೆ. ಸೋಲಿನ ನೋವಿನಿಂದ ಫುಟ್ಬಾಲ್ ಕೋಚ್ ರಾಜೀನಾಮೆ ನೀಡಿದ್ದಾರೆ.

ಶಾರ್ಜಾ(ಜ.16): ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ನಾಕೌಟ್‌ ಹಂತಕ್ಕೆ ಪ್ರವೇಶಿಲು ಭಾರತ ತಂಡ ವಿಫಲಗೊಂಡಿದ್ದರಿಂದ ನೋವಿಗೀಡಾದ ಪ್ರಧಾನ ಕೋಚ್‌ ಸ್ಟೀಫನ್‌ ಕಾನ್ಸ್‌ಟೈಂಟನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸೋಲಿನ ಬೆನ್ನಲ್ಲೇ ಇದೀಗ ಫುಟ್ಬಾಲ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಇದನ್ನೂ ಓದಿ: AFC ಏಷ್ಯನ್ ಕಪ್: ಭಾರತದ ನಾಕೌಟ್‌ ಕನಸು ಭಗ್ನ

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 91ನೇ ನಿಮಿಷದಲ್ಲಿ ಬಹರೇನ್‌ಗೆ ಪೆನಾಲ್ಟಿಬಿಟ್ಟುಕೊಟ್ಟು 0-1 ಗೋಲಿನಿಂದ ಸೋಲುಂಡಿತ್ತು. ಇದರೊಂದಿಗೆ ಚೊಚ್ಚಲ ಬಾರಿಗೆ ಏಷ್ಯನ್‌ ಕಪ್‌ ನಾಕೌಟ್‌ ಹಂತಕ್ಕೇರುವ ಭಾರತದ ಕನಸು ಭಗ್ನಗೊಂಡಿತ್ತು. ಸ್ಟೀಫನ್‌ರ ಗುತ್ತಿಗೆ ಅವಧಿ ಜ.31ಕ್ಕೆ ಮುಕ್ತಾಯಗೊಳ್ಳುತ್ತಿತ್ತು.

ಇದನ್ನೂ ಓದಿ: ಅಂಧರ ತಂಡಕ್ಕೆ ಭಾರತ ಫುಟ್ಬಾಲಿಗರಿಂದ 50 ಸಾವಿರ ರುಪಾಯಿ ದಾನ..!

ಅವಧಿಗೂ ಮೊದಲೇ ಸ್ಟೀಫನ್ ರಾಜೀನಾಮೆ ನೀಡಿದ್ದಾರೆ. ಎಷ್ಯನ್ ಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ತಂಡ, ಬಹರೇನ್ ವಿರುದ್ಧದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಸೋಲು ಅನುಭವಿಸಿತು. ಇಷ್ಟೇ  ಅಲ್ಲ ಅತ್ಯುತ್ತಮ ಅವಕಾಶವನ್ನೂ ಕಳೆದುಕೊಂಡಿತು.

click me!