ಐಸಿಸಿಗೆ ನೂತನ ಸಿಇಒ ಆಯ್ಕೆ- ಭಾರತಕ್ಕೆ ಒಲಿಯಿತು ಪಟ್ಟ!

By Web DeskFirst Published 16, Jan 2019, 9:04 AM IST
Highlights

ಐಸಿಸಿ ಹಾಲಿ ಸಿಇಒ ಡೇವಿಡ್ ರಿಚರ್ಡ್ಸನ್ ಅವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಹೀಗಾಗಿ ಐಸಿಸಿ ನೂತನ ಸಿಎಇಒ ಆಯ್ಕೆ ಮಾಡಲಾಗಿದೆ.  ವಿಶೇಷ  ಅಂದರೆ ಇದೀಗ ಐಸಿಸಿ ಸಿಇಒ ಪಟ್ಟ ಭಾರತಕ್ಕೆ ಒಲಿದಿದೆ.

ದುಬೈ(ಜ.16): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ನೂತನ ಸಿಇಒ ಆಗಿ ಭಾರತದ ಮನು ಸಾವ್ನಿ ಮಂಗಳವಾರ ನೇಮಕಗೊಂಡಿದ್ದಾರೆ. ಹಾಲಿ ಸಿಇಒ ಡೇವಿಡ್‌ ರಿಚರ್ಡ್‌ಸನ್‌, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. 

 

 

ಇದನ್ನೂ ಓದಿ: ಮಯಾಂಕ್ ಅಗರ್’ವಾಲ್ ಜತೆ 10 ಮಾತು ನೂರು ದನಿ..!

ಸಾವ್ನಿ, ಸಿಂಗಾಪುರ ಸ್ಪೋಟ್ಸ್‌ರ್‍ ಹಬ್‌ನಲ್ಲಿ ಸಿಇಒ ಆಗಿ ಮತ್ತು ಇಎಸ್‌ಪಿಎನ್‌ ಸ್ಟಾರ್‌ಸ್ಪೋಟ್ಸ್‌ರ್‍ ವಾಹಿನಿಯ ಮಾಜಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಜಾಗತಿಕ ಕ್ರಿಕೆಟ್‌ ಸಂಸ್ಥೆಯ ಸಿಇಒ ಆಗಿರುವುದು ನನಗೆ ದೊರೆತ ಅತಿದೊಡ್ಡ ಗೌರವವಾಗಿದೆ. ಜವಾಬ್ದಾರಿ ನಿಭಾಯಿಸುವ ಭರವಸೆ ಇದೆ’ ಎಂದು ಮನು ಹೇಳಿದ್ದಾರೆ.

ಹಾಲಿ ಐಸಿಸಿ ಸಿಇಒ ಡೇವಿಡ್ ರಿಚರ್ಡ್ಸನ್

Last Updated 16, Jan 2019, 9:04 AM IST