ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ನಿರಾಸೆಯ ನಡುವೆ ಕರ್ನಾಟಕದ ಪಂಕಜ್ ಆಡ್ವಾಣಿ ದೇಶಕ್ಕೆ ಸಂಭ್ರಮ ತಂದಿದ್ದಾರೆ. ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಗೆಲ್ಲುವ ಮೂಲಕ ದಾಖಲೆಯ 26ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ದೋಹಾ (ನ.21): ಭಾರತದ ಪ್ರಖ್ಯಾತ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಆಟಗಾರ ಪಂಕಜ್ ಆಡ್ವಾಣಿ ದಾಖಲೆಯ 26ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ದೇಶಬಾಂಧವ ಸೌರವ್ ಕೊಥಾರಿಯನ್ನು ಸೋಲಿಸುವ ಮೂಲಕ ದಾಖಲೆಯ 26ನೇ ಬಾರಿಗೆ ಕರ್ನಾಟಕದ ಬೆಂಗಳೂರಿನ ಪಂಕಜ್ ಆಡ್ವಾಣಿ ಪ್ರಶಸ್ತಿ ಗೆದ್ದರು. ಕಳೆದ ವರ್ಷ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಫೈನಲ್ ಪಂದ್ಯದ ರೀ ಮ್ಯಾಚ್‌ನಂತಿದ್ದ ಈ ಬಾರಿಯ ಫೈನಲ್‌ನಲ್ಲಿ ಪಂಕಜ್ ಆಡ್ವಾಣಿ 1000-416 ರಿಂದ ಸೌರವ್ ಕೊಥಾರಿಯನ್ನು ಸೋಲಿಸಿದರು. ಅವರು 2005 ರಲ್ಲಿ ಈ ಸ್ಪರ್ಧೆಯಲ್ಲಿ ತಮ್ಮ ಮೊದಲ ವಿಶ್ವ ಪ್ರಶಸ್ತಿಯನ್ನು ಗೆದ್ದಿದ್ದರು. ಅಡ್ವಾಣಿ ಅವರು ಒಂಬತ್ತನೇ ಬಾರಿಗೆ 'ಲಾಂಗ್ ಫಾರ್ಮ್ಯಾಟ್' ಗೆಲುವು ಕಂಡಿದ್ದಾರೆ. ಅವರು ಎಂಟು ಸಂದರ್ಭಗಳಲ್ಲಿ 'ಪಾಯಿಂಟ್ ಫಾರ್ಮ್ಯಾಟ್' ಚಾಂಪಿಯನ್‌ಶಿಪ್‌ನಲ್ಲಿ ಗೆದ್ದರು, ಜೊತೆಗೆ ಒಮ್ಮೆ ವಿಶ್ವ ಟೀಮ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಜಯಿಸಿದ್ದಾರೆ.
ಈ ಪಂದ್ಯಾವಳಿಯಲ್ಲಿ ಅಡ್ವಾಣಿ ಸೆಮಿಫೈನಲ್‌ನಲ್ಲಿ ಭಾರತದ ಸಹ ಆಟಗಾರ ರೂಪೇಶ್ ಶಾ ಅವರನ್ನು 900-273 ಅಂಕಗಳಿಂದ ಸೋಲಿಸಿದರು. ಇದು ಹಾಲಿ ಚಾಂಪಿಯನ್‌ನಿಂದ 259 ಮತ್ತು 176 ರ ಬ್ರೇಕ್‌ಗಳನ್ನು ಕಂಡಿತು, ಆದರೆ ಷಾ 900-ಅಪ್ ಫಾರ್ಮ್ಯಾಟ್‌ನಲ್ಲಿ ಮಾತ್ರ 62 ಬ್ರೇಕ್‌ಗಳನ್ನುಕಂಡರು. ಇನ್ನೊಂದು ಸೆಮಫೈನಲ್ ಪಂದ್ಯದಲ್ಲಿ ಸೌರವ್ ಕೊಥಾರಿ ಭಾರತೀಯ ಮೂಲದ ಧ್ರುವ್ ಸಿಲ್ವಾಲಾರನ್ನು 900-756 ರಿಂದ ಸೋಲಿಸಿದರು.
undefined
Pankaj Advani: 25ನೇ ಬಾರಿಗೆ ಪಂಕಜ್ ಅಡ್ವಾಣಿ ವಿಶ್ವಚಾಂಪಿಯನ್
ವಿಶೇಷವೆಂದರೆ, ಸರಿಯಾಗಿ 20 ವರ್ಷಗಳ ಹಿಂದೆ ಇದೇ ದಿನ ಪಂಕಜ್ ಆಡ್ವಾಣಿ ತಮ್ಮ ಮೊಟ್ಟ ಮೊದಲ ವಿಶ್ವ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಚೀನಾದಲ್ಲಿ ಗೆದ್ದಿದ್ದರು. ಈಗ ಅದೇ ದಿನ 26ನೇ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ.
ವಿಶ್ವ ಸ್ನೂಕರ್ ತಂಡ ಕೂಟ: ಪಂಕಜ್‌ಗೆ 23ನೇ ವಿಶ್ವ ಕಿರೀಟ!
IBSF World Billiards Champion (Long Format) 🏆😊
This is for us India 🇮🇳🙏🏻 pic.twitter.com/kLEdRPpnnq