
ನವದೆಹಲಿ(ಜೂ.22): ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಹೊಂದಿರುವ ಭಾರತ ತಂಡ, ಮುಂದಿನ 5 ವರ್ಷಗಳಲ್ಲಿ 3 ಮಾದರಿಯಲ್ಲಿ ಒಟ್ಟು 203 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
ಐಸಿಸಿ ಪ್ರಕಟಿಸಿರುವ 2018-2023ರ ಭವಿಷ್ಯದ ಪಂದ್ಯಗಳ ವೇಳಾಪಟ್ಟಿ ಪ್ರಕಾರ ಭಾರತ, 51 ಟೆಸ್ಟ್, 83 ಏಕದಿನ ಮತ್ತು 69 ಟಿ20 ಪಂದ್ಯಗಳನ್ನಾಡಲಿದೆ. ವಿಶ್ವದ ಇನ್ನುಳಿದ ಕ್ರಿಕೆಟ್ ತಂಡಗಳಿಗೆ ಹೋಲಿಸಿದರೆ, ಭಾರತ ಅತಿಹೆಚ್ಚು ಪಂದ್ಯಗಳನ್ನಾಡಲಿದೆ. ಈ ಅವಧಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಕ್ರಮವಾಗಿ 186 ಮತ್ತು 175 ಪಂದ್ಯಗಳನ್ನಾಡಲಿವೆ. ಆಸ್ಟ್ರೇಲಿಯಾ 174 ಪಂದ್ಯಗಳನ್ನಾಡಲಿದೆ.
ಇದನ್ನು ಓದಿ: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ
ಇನ್ನು ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಬಂದರೆ ಇಂಗ್ಲೆಂಡ್ ಅತಿಹೆಚ್ಚು[59] ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಭಾರತ[51] ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡವು 47 ಟೆಸ್ಟ್ ಪಂದ್ಯಗಳನ್ನಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.