ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ಗೆ 11ನೇ ಜಯ

By Web Desk  |  First Published Jul 15, 2019, 10:23 AM IST

ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ತಮ್ಮ ಗೆಲುವಿನ ನಾಗಾಲೋಟಾ ಮುಂದುವರೆಸಿದ್ದು, ಅಮೆರಿಕದ ಮೈಕ್‌ ಸ್ನೈಡರ್‌ ಮಣಿಸಿ ಸತತ 11 ಗೆಲುವು ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಪಂದ್ಯದ ಕುರಿತ ಮಾಹಿತಿ ಇಲ್ಲಿದೆ ನೋಡಿ...


ನೆವಾರ್ಕ್[ಜು.15]: ಭಾರತದ ತಾರಾ ಬಾಕ್ಸರ್‌ ವಿಜೇಂದರ್‌ ಸಿಂಗ್‌, ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯವಾಗಿ ಉಳಿದಿದ್ದಾರೆ. ಶನಿವಾರ ಇಲ್ಲಿ ನಡೆದ ಬೌಟ್‌ನಲ್ಲಿ ಅಮೆರಿಕದ ಮೈಕ್‌ ಸ್ನೈಡರ್‌ ವಿರುದ್ಧ ವಿಜೇಂದರ್‌ ತಾಂತ್ರಿಕ ನಾಕೌಟ್‌ನಿಂದ ಗೆಲುವು ಸಾಧಿಸಿದರು. 

ಅಮೆರಿಕದಲ್ಲೂ ವಿಜೇಂದರ್ ಬಾಕ್ಸಿಂಗ್..!

Tap to resize

Latest Videos

undefined

8 ಸುತ್ತುಗಳ ಪಂದ್ಯದ ಮೊದಲ 4 ಸುತ್ತುಗಳನ್ನು ತಮ್ಮದಾಗಿಸಿಕೊಂಡ ವಿಜೇಂದರ್‌ರನ್ನು ವಿಜಯಿ ಎಂದು ಘೋಷಿಸಲಾಯಿತು. 4ನೇ ಸುತ್ತಿನ 2ನೇ ನಿಮಿಷದಲ್ಲಿ ವಿಜೇಂದರ್‌, ಸ್ನೈಡರ್‌ ಮೇಲೆ ಪ್ರಬಲ ಪಂಚ್‌ಗಳನ್ನು ಪ್ರಯೋಗಿಸುತ್ತಿದ್ದಂತೆ ರೆಫ್ರಿ ಫಲಿತಾಂಶವನ್ನು ಭಾರತೀಯ ಬಾಕ್ಸರ್‌ ಪರ ನೀಡಿದರು. 

ಹರ್ಯಾಣ ಮೂಲದ 33 ವರ್ಷದ ವಿಜೇಂದರ್ ಈ ವರೆಗೂ 11 ಪಂದ್ಯಗಳನ್ನು ಆಡಿದ್ದು 11ರಲ್ಲೂ ಜಯಿಸಿದ್ದಾರೆ. ಈ ಪೈಕಿ 8ರಲ್ಲಿ ನಾಕೌಟ್‌ ಮೂಲಕ ಗೆದ್ದಿದ್ದಾರೆ.

click me!