ಫಿಫಾ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿರುವ ಭಾರತ ಇದೀಗ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದೆ. ಇಂದು(ಸೆ.10) ಕತಾರ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ದೋಹಾ (ಕತಾರ್)ಸೆ.10: ಭಾರತ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 2ನೇ ಹಂತದಲ್ಲಿ ಮಂಗಳವಾರ ಏಷ್ಯನ್ ಚಾಂಪಿಯನ್ ಕತಾರ್ ತಂಡವನ್ನು ಎದುರಿಸಲಿದೆ. ‘ಇ’ ಗುಂಪಿನಲ್ಲಿರುವ ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಒಮಾನ್ ವಿರುದ್ಧ 1-2 ಗೋಲುಗಳಲ್ಲಿ ಸೋಲುಂಡಿತ್ತು.
⚡ MATCHDAY! 🇮🇳 ⚡
The 🐯 face-off against Asian champions Qatar 🇶🇦 in the 2⃣nd match of their 🌏🏆 campaign today! 🤩 ⚔ 💙 ⚽ pic.twitter.com/YfcT1quCTg
undefined
ಇದನ್ನೂ ಓದಿ: ವಿಶ್ವಕಪ್ ಕ್ವಾಲಿಫೈಯರ್: ಭಾರತ ತಂಡಕ್ಕೆ ಆಘಾತ!
ವಿಶ್ವ ರಾರಯಂಕಿಂಗ್‌ನಲ್ಲಿ 62ನೇ ಸ್ಥಾನದಲ್ಲಿರುವ ಕತಾರ್ ಎದುರಿಸುವುದು ಭಾರತಕ್ಕೆ ಭಾರೀ ದೊಡ್ಡ ಸವಾಲಾಗಿ ಪರಿಣಮಿಸಲಿದೆ. 2022ರ ವಿಶ್ವಕಪ್ಗೆ ಆತಿಥ್ಯ ವಹಿಸಲಿರುವ ಕತಾರ್, ನೇರ ಪ್ರವೇಶ ಪಡೆದಿದ್ದರೂ ಬಲಿಷ್ಠ ತಂಡ ಕಟ್ಟಲು ಈ ಟೂರ್ನಿಯನ್ನು ಬಳಸಿಕೊಳ್ಳುತ್ತಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಕತಾರ್, ಆಷ್ಘಾನಿಸ್ತಾನ ವಿರುದ್ಧ 6-0 ಗೋಲುಗಳಿಂದ ಗೆಲುವು ಸಾಧಿಸಿತ್ತು.