ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಭಾರತದ ಬ್ಯಾಟಿಂಗ್ ಬಳಿಕ ವಿಂಡೀಸ್ ಬ್ಯಾಟಿಂಗ್ ಸರದಿ. ಆದರೆ ಭಾರತದ ಕರಾರುವಕ್ ದಾಳಿಗೆ ವಿಂಡೀಸ್ ತತ್ತರಿಸಿದೆ. ಇದೀಗ ಆಲೌಟ್ ಭೀತಿ ಎದುರಿಸುತ್ತಿದೆ.
ಆ್ಯಂಟಿಗಾ(ಆ.24): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಹಲವು ರೋಚಕ ತಿರುವು ಪಡೆದುಕೊಂಡಿದೆ. ದ್ವಿತೀಯ ದಿನದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಭಾರತ 297 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ದ್ವಿತೀಯ ದಿನದಾಟದಲ್ಲಿ ಇಶಾಂತ್ ಶರ್ಮಾ ದಾಳಿಗೆ ಪರದಾಡಿತು. ಹೀಗಾಗಿ ದಿನದಾಟದ ಅಂತ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿದೆ.
ಇದನ್ನೂ ಓದಿ: ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!
undefined
ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ದಾಳಿಗೆ ಆರಂಭಿಕರ ವಿಕೆಟ್ ಪತನಗೊಂಡಿತು. ಜಾನ್ ಕ್ಯಾಂಬೆಲ್ 23 ಹಾಗೂ ಕ್ರೈಗ್ ಬ್ರಾಥ್ವೈಟ್ 14 ರನ್ ಸಿಡಿಸಿ ಔಟಾದರು. ಶಮ್ರ ಬ್ರುಕ್ಸ್ 11 ರನ್‌ಗೆ ಸುಸ್ತಾದರು. ಡರೆನ್ ಬ್ರಾವೋ 18 ರನ್‌ಗಳಿಸಿ ವಿಕೆಟ್ ಕೈಚೆಲ್ಲಿದರು.
ಇದನ್ನೂ ಓದಿ: ಆ್ಯಷಸ್ ಟೆಸ್ಟ್: 67ಕ್ಕೆ ಇಂಗ್ಲೆಂಡ್ ಆಲೌಟ್, ಆಂಗ್ಲರ ಬೆಂಡೆತ್ತಿದ ಫ್ಯಾನ್ಸ್!
ರೋಸ್ಟನ್ ಚೇಸ್ ಹಾಗೂ ಶೈ ಹೋಪ್ ಜೊತೆಯಾಟದಿಂದ ವಿಂಡೀಸ್ ಅಲ್ಪ ಚೇತರಿಕೆ ಕಂಡಿತು. ಚೇಸ್ 48 ರನ್ ಸಿಡಿಸಿ ಔಟಾದರು. ಶೈ ಹೋಪ್ 24 ರನ್ ಸಿಡಿಸಿ ಔಟಾದರು. ಶಿಮ್ರೊನ್ ಹೆಟ್ಮೆಯರ್ 35 ರನ್ ಕಾಣಿಕೆ ನೀಡಿದರು. ದಿನದಾಟ ಅಂತ್ಯದಲ್ಲಿ ವಿಂಡೀಸ್ 8 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿದೆ. ಸದ್ಯ ನಾಯಕ ಜಾಸನ್ ಹೋಲ್ಡರ್ ಅಜೇಯ 10 ಹಾಗೂ ಮಿಗೆಲ್ ಕಮಿನ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ವಿಂಡೀಸ್ ಮೊದಲ ಇನ್ನಿಂಗ್ಸ್‍ನಲ್ಲಿ 108 ರನ್ ಹಿನ್ನಡೆಯಲ್ಲಿದೆ. ಇಶಾಂತ್ ಶರ್ಮಾ 5 ವಿಕೆಟ್ ಕಬಳಿಸಿ ಮಿಂಚಿದರು.