
ಚೆನ್ನೈ(ಆ.24): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಸತತ 6 ಸೋಲುಗಳಿಂದ ಕಂಗೆಟ್ಟಿದ್ದ 2 ಬಾರಿ ರನ್ನರ್-ಅಪ್ ಗುಜರಾತ್ ಫಾರ್ಚೂನ್‌ಜೈಂಟ್ಸ್, ಕೊನೆಗೂ ಗೆಲುವಿನ ಸಿಹಿಯುಂಡಿದೆ. ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 29-26 ಅಂಕಗಳ ರೋಚಕ ಗೆಲುವು ಸಾಧಿಸಿತು. ಪಾಟ್ನಾಗಿದು ಈ ಆವೃತ್ತಿಯಲ್ಲಿ 7ನೇ ಸೋಲಾಗಿದ್ದು, ತಂಡ ಪ್ಲೇ-ಆಫ್ಗೇರುವುದು ಅನುಮಾನ ಎನಿಸುತ್ತಿದೆ. ಮೊದಲಾರ್ಧದ ಮುಕ್ತಾಯಕ್ಕೆ 15-11ರಿಂದ ಮುಂದಿದ್ದ ಪಾಟ್ನಾ, ದ್ವಿತೀಯಾರ್ಧದಲ್ಲಿ ಮಂಕಾಯಿತು. ನಾಯಕ ಪ್ರದೀಪ್(09) ಅಂಕ ಗಳಿಸಿದರೂ ಪಾಟ್ನಾ ಗೆಲ್ಲಲಿಲ್ಲ. ರೋಹಿತ್ (10 ಅಂಕ) ಗುಜರಾತ್ ಗೆಲುವಿಗೆ ನೆರವಾದರು.
ಇದನ್ನೂ ಓದಿ: ಬೆಂಗಳೂರು ಬುಲ್ಸ್ ತಂಡದಲ್ಲಿ ಬಾಕಿ ಹಗರಣ; ಮಾಲೀಕರ ವಿರುದ್ಧ ಅಸಮಧಾನ!
ಮುಂಬಾಗೆ ಭರ್ಜರಿ ಜಯ
ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಯು ಮುಂಬಾ 00-00 ಅಂತರದಲ್ಲಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಮುಂಬಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ತವರಿನ ಚರಣವನ್ನು ತಲೈವಾಸ್ ಒಂದೂ ಗೆಲುವು ಕಾಣದೆ ಮುಕ್ತಾಯಗೊಳಿಸಿತು. ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಸೋತರೆ ಮತ್ತೊಂದು ಪಂದ್ಯ ಟೈ ಆಗಿತ್ತು. ಶನಿವಾರದಿಂದ ದೆಹಲಿ ಚರಣ ಆರಂಭಗೊಳ್ಳಲಿದ್ದು, ದಬಾಂಗ್ ಡೆಲ್ಲಿ ತಂಡ ತನ್ನ ತವರಿನ ಪಂದ್ಯಗಳನ್ನು ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.