
ನವದೆಹಲಿ[ಆ.01]: ಇಂದೋರ್‌ನಲ್ಲಿ ಅ.24ರಂದು ನಡೆಯಬೇಕಿದ್ದ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ಸ್ಥಳಾಂತರಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಡುವಿನ ಉಚಿತ ಟಿಕೆಟ್‌ಗಳ ಹಂಚಿಕೆ ವಿವಾದದಿಂದಾಗಿ ಪಂದ್ಯ ಬೇರೆಡೆ ನಡೆಯಲಿದೆ ಎನ್ನಲಾಗುತ್ತಿದೆ. ಬಿಸಿಸಿಐ ನಿಯಮದ ಪ್ರಕಾರ ಟಿಕೆಟ್ ಮಾರಾಟ ನಡೆದಿಲ್ಲ. ಹೀಗಾಗಿ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿ: ಭಾರತ ತಂಡಕ್ಕೆ ಮಯಾಂಕ್ ಎಂಟ್ರಿ-ಮತ್ತೊಬ್ಬ ಕನ್ನಡಿಗನಿಗೆ ಕೊಕ್! ಯಾಕೆ ಹೀಗೆ?
ಹೋಳ್ಕರ್ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್’ಗಳ ಪೈಕಿ ಶೇ.90% ಟಿಕೆಟ್’ಗಳನ್ನು ಸಾರ್ವಜನಿಕ ವೀಕ್ಷಕರಿಗೆ ಲಭ್ಯವಿದ್ದರೆ, ಉಳಿದ ಟಿಕೆಟ್’ಗಳು ಕಾಂಪ್ಲಿಮೆಂಟರಿ ಪಾಸ್’ಗಳಾಗಿವೆ. ಅಂದರೆ 27,000 ಟಿಕೆಟ್’ಗಳ ಪೈಕಿ 2,700 ಟಿಕೆಟ್’ಗಳು ಕಾಂಪ್ಲಿಮೆಂಟರಿ ಪಾಸ್’ಗಳಾಗಿ ನೀಡಲಾಗುತ್ತದೆ. ಈ ಕುರಿತಂತೆ ವಿವಾದ ಏರ್ಪಟ್ಟಿದೆ ಎಂದು ಇಂಗ್ಲಿಷ್ ಖಾಸಗಿ ವೆಬ್’ಸೈಟ್’ವೊಂದು ವರದಿ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.