ಇಂಡೋ-ವಿಂಡೀಸ್ ಟಿ20-ರೋಚಕ ತಿರುವು ಪಡೆದ ಚುಟುಕು ಸಮರ!

Published : Nov 04, 2018, 09:35 PM IST
ಇಂಡೋ-ವಿಂಡೀಸ್ ಟಿ20-ರೋಚಕ ತಿರುವು ಪಡೆದ ಚುಟುಕು ಸಮರ!

ಸಾರಾಂಶ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಹೋರಾಟ ರೋಚಕ ಘಟ್ಟದತ್ತ ಸಾಗುತ್ತಿದೆ. ಸುಲಭ ಟಾರ್ಗೆಟ್ ಎಂದುಕೊಂಡಿದ್ದ ಟೀಂ ಇಂಡಿಯಾ ಇದೀಗ ಮುಳ್ಳಿನ ಹಾದಿ ಸವೆಸಬೇಕಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.  

ಕೋಲ್ಕತ್ತಾ(ನ.04): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ರೋಚಕ ತಿರುವು ಪಡೆಯುತ್ತಿದೆ. ವೆಸ್ಟ್ ಇಂಡೀಸ್ ನೀಡಿದ 110ರನ್ ಸುಲಭ ಟಾರ್ಗೆಟ್ ಬೆನ್ನಟ್ಟಲು ಕಣಕ್ಕಿಳಿದ ಟೀಂ ಇಂಡಿಯಾ ಇದೀಗ ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿದೆ.

ನಾಯಕ ರೋಹಿತ್ ಶರ್ಮಾ 6 ರನ್ ಸಿಡಿಸಿ ಔಟಾದರು. ಮತ್ತೊರ್ವ ಆರಂಭಿಕ ಶಿಖರ್ ಧವನ್ 3 ರನ್ ದಾಟಲಿಲ್ಲ. ಏಕದಿನ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕನ್ನಡಿಗ ಕೆಎಲ್ ರಾಹುಲ್ ಸಿಕ್ಕ ಅವಕಾಶ ಉಪಯೋಗಿಸಲಿಲ್ಲ. ರಾಹುಲ್ 16 ರನ್ ಸಿಡಿಸಿ ಔಟಾದರು.

ಎಂ.ಎಸ್ ಧೋನಿ ಬದಲು ಚುಟುಕು ಮಾದರಿಯಲ್ಲಿ ಅವಕಾಶ ಪಡೆದ ಯುವ ಕ್ರಿಕೆಟಿಗ ರಿಷಬ್ ಪಂತ್ 1 ರನ್ ಸಿಡಿಸಿ ನಿರ್ಗಮಿಸಿದರು. ಹೀಗಾಗಿ 45 ರನ್ ಸಿಡಿಸುವಷ್ಟರಲ್ಲೇ ಭಾರತ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಯಾಮ್ಸನ್ ಪವರ್‌ಗೆ ವಿಂಡೀಸ್ ಉಡೀಸ್, ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ
ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು?