ಭಾರತದ ಗೆಲುವಿಗೆ 110 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!

By Web DeskFirst Published Nov 4, 2018, 8:39 PM IST
Highlights

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 109 ರನ್ ಸಿಡಿಸಿದೆ. ವಿಂಡೀಸ್ ಬ್ಯಾಟಿಂಗ್ ಹಾಗೂ ಟೀಂ ಇಂಡಿಯಾ ಬೌಲಿಂಗ್ ಅಪ್‌ಡೇಟ್ಸ್ ಇಲ್ಲಿದೆ.

ಕೋಲ್ಕತ್ತಾ(ನ.04): ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್  ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಸಿಡಿಸಿದೆ. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ 110 ರನ್ ಟಾರ್ಗೆಟ್ ನೀಡಿದೆ.

 

Innings Break!

Outstanding bowling from restrict the Windies to a total of 109/8.

Chase coming up shortly pic.twitter.com/R5czini4KH

— BCCI (@BCCI)

 

ಆರಂಭಿಕನಾಗಿ ಕಣಕ್ಕಿಳಿದ ದಿನೇಶ್ ರಾಮ್ದಿನ್ ಕೇವಲ 2 ರನ್ ಸಿಡಿಸಿ ಔಟಾದರು. ಶೈ ಹೋಪ್ 14 ರನ್ ಕಾಣಿಕೆ ನೀಡಿದರು. ಶಿಮ್ರೊನ್ ಹೆಟ್ಮೆಯರ್ 10 ರನ್ ಸಿಡಿಸಿ ನಿರ್ಗಮಿಸಿದರೆ, ಹಿರಿಯ ಕ್ರಿಕೆಟಿಗ ಕೀರನ್ ಪೊಲಾರ್ಡ್ 14 ರನ್ ಸಿಡಿಸಿ ಔಟಾದರು.

ಡರೆನ್ ಬ್ರಾವೋ, ರೋವ್ಮಾನ್ ಪೊವೆಲ್ ಹಾಗೂ ಕಾರ್ಲೋಸ್ ಬ್ರಾಥ್ವೈಟ್ ಕೂಡ ಆಸರೆಯಾಗಲಿಲ್ಲ.   ಫಾಬಿಯನ್ ಅಲೆನ್ ಸಿಡಿಸಿದ 27 ರನ್‌ಗಳ ನೆರವಿನಿಂದ ವಿಂಡೀಸ್ 90 ರನ್ ಗಡಿ ದಾಟಿತು. ಈ ಮೂಲಕ ನಿಗಧಿತ 20 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 109 ರನ್ ಸಿಡಿಸಿತು. ಚೊಚ್ಚಲ ಪಂದ್ಯದಲ್ಲಿ ಕ್ರುನಾಲ್ ಪಾಂಡ್ಯ ಹಾಗೂ ಖಲೀಲ್ ಅಹಮ್ಮದ್ ಮೊದಲ ವಿಕೆಟ್ ಸಂಭ್ರಮ ಆಚರಿಸಿದರು. ಇನ್ನು ಕುಲ್ದೀಪ್ ಯಾದವ್ 3 ವಿಕೆಟ್ ಕಬಳಿಸಿದರು.

click me!