#INDvSA ಬೆಂಗಳೂರು ಪಂದ್ಯ; ಹವಾಮಾನ ವರದಿ ಪ್ರಕಟ, ಆತಂಕದಲ್ಲಿ ಫ್ಯಾನ್ಸ್!

By Web Desk  |  First Published Sep 21, 2019, 6:20 PM IST

ಸೆ.22 ರಂದು ಬೆಂಗಳೂರಿನಲ್ಲಿ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದ ದಿನ ಬೆಂಗಳೂರಿನ ಹವಾಮಾನ ವರದಿ ಏನು ಹೇಳುತ್ತೆ? ಇಲ್ಲಿದೆ ವಿವರ.


ಬೆಂಗಳೂರು(ಸೆ.21): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ  3ನೇ ಹಾಗೂ ಅಂತಿಮ ಟ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆಗೆ ಸರಣಿ ಗೆಲುವಿನ ತವಕ. ಇತ್ತ ಸೌತ್ ಆಫ್ರಿಕಾ ಸರಣಿ ಸಮಬಲ ಮಾಡಿಕೊಳ್ಳಲು ತಯಾರಾಗಿದೆ. ಈ ಮಹತ್ವದ ಪಂದ್ಯಕ್ಕೆ ಇದೀಗ ಆತಂಕ ಎದುರಾಗಿದೆ.

ಇದನ್ನೂ ಓದಿ: ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

Latest Videos

undefined

ಧರ್ಮಶಾಲಾ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯ ಫಲಿತಾಂಶ ಕಾಣದೆ  ರದ್ದಾಗಿತ್ತು. ಇದೀಗ ಬೆಂಗಳೂರು ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಸೆ.22 ರಂದು ನಡೆಯಲಿರುವ ಬೆಂಗಳೂರು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಎಂದು ಹವಾಮಾನ ವರದಿ ಹೇಳುತ್ತಿದೆ. 

ಇದನ್ನೂ ಓದಿ: ಚಿನ್ನಸ್ವಾಮಿಗಿಲ್ಲ ಇನ್ನು ವರುಣನ ಕಾಟ

ಭಾನುವಾರ ಬೆಂಗಳೂರಲ್ಲಿ  ಗುಡುಗು ಸಹಿತ ತುಂತುರ ಮಳೆಯಾಗಲಿದೆ ಅನ್ನೋ ಹವಾಮಾನ ವರದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಲ್ಲಿ ವಿಶ್ವದರ್ಜೆಯ ಸಬ್ ಏರ್ ಸಿಸ್ಟಮ್ ಇರುವುದರಿಂದ ಅದೆಷ್ಟೇ ಮಳೆ ಸುರಿದರೂ 5 ನಿಮಿಷದಲ್ಲಿ ಮೈದಾನದವನ್ನು ಆಟಕ್ಕೆ ಸಜ್ಜುಗೊಳಿಸುವ ವ್ಯವಸ್ಥೆ ಇದೆ. ಆದರೆ ಮಳೆ ಅನುವು ಮಾಡಿಕೊಡಬೇಕು ಅಷ್ಟೆ. 
 

click me!