ಪ್ರಧಾನಿಯ ಮಾತನ್ನೇ ಕಡೆಗಣಿಸಿದ ಪಾಕ್ ಕ್ರಿಕೆಟಿಗರು!

Published : Jun 17, 2019, 10:16 AM ISTUpdated : Jun 17, 2019, 11:20 AM IST
ಪ್ರಧಾನಿಯ ಮಾತನ್ನೇ ಕಡೆಗಣಿಸಿದ ಪಾಕ್ ಕ್ರಿಕೆಟಿಗರು!

ಸಾರಾಂಶ

ಭಾರತ ವರ್ಸಸ್ ಪಾಕ್| ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಮಹತ್ವದ ಸಲಹೆ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಪಾಖ್ ಪ್ರಧಾನಿ ಇಮ್ರಾನ್ ಖಾನ್| ಪಾಕ್‌ ಪ್ರಧಾನಿ ಸಲಹೆಗೂ ಇಲ್ಲ ಕಿಮ್ಮತ್ತು!| ಗೆದ್ದ ಭಾರತ, ಸೋತ ಪಾಕ್!

ಇಸ್ಲಮಾಬಾದ್[ಜೂ.17]: 1992ರ ವಿಶ್ವಕಪ್‌ ವಿಜೇತ ನಾಯಕ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪಂದ್ಯ ಆರಂಭಗೊಳ್ಳುವ ಕೆಲ ಗಂಟೆಗಳ ಮೊದಲು ಟ್ವೀಟರ್‌ನಲ್ಲಿ ತಂಡಕ್ಕೆ ಶುಭ ಕೋರಿದ್ದರು. ಜತೆಗೆ ಕೆಲ ಸಲಹೆಗಳನ್ನೂ ನೀಡಿದ್ದರು.

ಪಾಕ್‌ ನಾಯಕ ಸರ್ಫರಾಜ್‌ ಟಾಸ್‌ ಗೆದ್ದರೆ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಮ್ರಾನ್‌ ಟ್ವೀಟ್‌ ಮಾಡಿದ್ದರು. ಆದರೆ ಟಾಸ್‌ ಗೆದ್ದ ಸರ್ಫರಾಜ್‌ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು.

ಪ್ರಧಾನಿ ಮಾತಿಗೇ ಕಿಮ್ಮತ್ತು ನೀಡಲಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಭಾರತೀಯ ಅಭಿಮಾನಿಗಳು ಪಾಕ್‌ ತಂಡದ ಕಾಲೆಳೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

W, W, W, W, W.. ಡಬಲ್ ಹ್ಯಾಟ್ರಿಕ್, ಒಂದೇ ಓವರ್‌ನಲ್ಲಿ 5 ವಿಕೆಟ್‌ಗಳು! ಆದರೂ ತಂಡಕ್ಕೆ ಅದೃಷ್ಟ ಇರಲಿಲ್ಲ
ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ: ಐದನೇ ಬಾರಿಗೆ ಈ ಪ್ರಶಸ್ತಿ ಗೆದ್ದ ಶುಭ್‌ಮನ್ ಗಿಲ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು?