ನಾಳೆ ಇಂಡೋ-ಪಾಕ್ ಪಂದ್ಯ: ಎದ್ದೇಳಲು 3 ಕೋಟಿ ವಾಚ್ ಕೊಂಡ ಪಾಂಡ್ಯ!

Published : Jun 15, 2019, 06:41 PM IST
ನಾಳೆ ಇಂಡೋ-ಪಾಕ್ ಪಂದ್ಯ: ಎದ್ದೇಳಲು 3 ಕೋಟಿ ವಾಚ್ ಕೊಂಡ ಪಾಂಡ್ಯ!

ಸಾರಾಂಶ

ಹಾರ್ದಿಕ್ ಪಾಂಡ್ಯ ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಶರ್ಟ್, ಶೂ, ಜೀನ್ಸ್ ಯಾವುದೇ ವಸ್ತುಗಳಿರಲಿ ದುಬಾರಿಯಾಗಿರುತ್ತೆ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಬಹಿರಂಗವಾಗಿದೆ. 

ಲಂಡನ್(ಜೂ.15): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನದಷ್ಟೇ ತಮ್ಮ ಸ್ಟೈಲ್‌ನಲ್ಲೂ ಜನಪ್ರಿಯರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಈಗಾಗಲೇ ಪಾಂಡ್ಯ 1 ಲಕ್ಷ ರೂಪಾಯಿ ಬೆಲೆ ಲೂಯಿಸಿ ವಿಟ್ಟನ್ ಪ್ಯಾರಿಸ್ ಶರ್ಟ್ ಧರಿಸಿ ಸುದ್ದಿಯಾಗಿದ್ದಾರೆ. ಪಾಂಡ್ಯ ಬಳಸೋ ಸ್ನಿಕರ್ ಶೂ ಬೆಲೆ 85,000 ರೂಪಾಯಿ. ಇದೀಗ ಪಾಂಡ್ಯ  ಬಳಿ ಇರೋ ವಾಚ್ ಬೆಲೆ ಬಹಿರಂಗವಾಗಿದೆ.

ಇದನ್ನೂ ಓದಿ: ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ!

ಪಾಂಡ್ಯ ಶರ್ಟ್, ಶೂ ಬೆಲೆ ದುಬಾರಿ ನಿಜ. ಆದರೆ ಬೆಚ್ಚಿ ಬೀಳುವಂತಿಲ್ಲ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರೆಂಟಿ. ಕಾರಣ ಹಾರ್ದಿಕ್ ಪಾಂಡ್ಯ ಪಾಟೆಕ್ ಫಿಲಿಪ್ ನೌಟಿಲಸ್ ಬ್ರ್ಯಾಂಡ್ ವಾಚ್ ಧರಿಸುತ್ತಾರೆ. ವೈಟ್ ಗೋಲ್ಡ್ ಹಾಗೂ ಡೈಮಂಡ್ ಮಿಶ್ರಿತ ಈ ವಾಚ್ ಬಲೆ ಬರೋಬ್ಬರಿ 3 ಕೋಟಿ ರೂಪಾಯಿ.

ಇದನ್ನೂ ಓದಿ: ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!

ಪಾಂಡ್ಯ 3 ಕೋಟಿ ರೂಪಾಯಿ ವಾಚ್ ಐಪಿಎಲ್ ಟೂರ್ನಿಗೂ ಮುನ್ನ ಖರೀದಿಸಿದ್ದಾರೆ.  ಹಾರ್ದಿಕ್ ಪಾಂಡ್ಯ ಬಳಿ ಹಲವು ದುಬಾರಿ ವಾಚ್‌ಗಳಿವೆ. ಎಲ್ಲಾ ವಾಚ್ ಬೆಲೆ ಲಕ್ಷ ಲಕ್ಷ ರೂಪಾಯಿ. ಪಾಂಡ್ಯ ಬಳಸೋ ಪ್ರತಿಯೊಂದು ವಸ್ತು ಕೂಡ ಅತ್ಯಂತ ದುಬಾರಿ. ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಪಾಂಡ್ಯ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!
ಬಾಂಗ್ಲಾದೇಶ ಮಾತ್ರವಲ್ಲ ಪಾಕಿಸ್ತಾನವೂ ಟಿ20 ವಿಶ್ವಕಪ್‌ನಿಂದ ಔಟ್! ಸಿದ್ದತೆ ನಿಲ್ಲಿಸಿದ ಪಾಕ್!