ರಾಯುಡು ಹೋರಾಟ- ನ್ಯೂಜಿಲೆಂಡ್‌ಗೆ 253 ರನ್ ಟಾರ್ಗೆಟ್ ನೀಡಿದ ಭಾರತ!

By Web DeskFirst Published Feb 3, 2019, 11:05 AM IST
Highlights

ಆರಂಭದಲ್ಲಿ ಆಘಾತ ಅನುಭವಿಸಿದ್ದ ಟೀಂ ಇಂಡಿಯಾ ಅಂಬಾಟಿ ರಾಯುಡು ಸೇರಿದಂತೆ ಮಧ್ಯಮ ಕ್ರಮಾಂಕದ ಹೋರಾಟದಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.  

ವೆಲ್ಲಿಂಗ್ಟನ್(ಫೆ.03): ನ್ಯೂಜಿಲೆಂಡ್ ವಿರುದ್ದದ  5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ  49.5 ಓವರ್‌ಗಳಲ್ಲಿ 252 ರನ್‌ಗೆ ಆಲೌಟ್ ಆಗಿದೆ. ಅಂಬಾಟಿ ರಾಯುಡು, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ ಹೋರಾಟದಿಂದ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಇದೀಗ ನ್ಯೂಜಿಲೆಂಡ್ ಗೆಲುವಿಗೆ 253 ರನ್ ಟಾರ್ಗೆಟ್ ನೀಡಿದೆ. 

ಇದನ್ನೂ ಓದಿ: ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ 8 ರನ್‌ಗಳಿಸುವಷ್ಟರಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ 2 ರನ್ ಸಿಡಿಸಿ ಔಟಾದರೆ, ಶಿಖರ್ ಧವನ್ 6 ರನ್ ಸಿಡಿಸಿ ವಿಕೆಟ್ ಕೈಚೆಲಿಲ್ಲಿದರು. ಈ ಮೂಲಕ ಸತತ 2ನೇ ಹಾರಿ ಆರಂಭಿಕ ಜೋಡಿ ಅತ್ಯುಮತ್ತ ಜೊತೆಯಾಟ ನೀಡುವಲ್ಲಿ ವಿಫಲವಾಯಿತು.

ಇದನ್ನೂ ಓದಿ: ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

ಚೊಚ್ಚಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಶುಭ್‌ಮಾನ್ ಗಿಲ್ , 2ನೇ ಪಂದ್ಯದಲ್ಲೂ ಭರವಸೆ ಮೂಡಿಸಲಿಲ್ಲ. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿದ ಎಂ.ಎಸ್.ಧೋನಿ ಕೇವಲ 1 ರನ್ ಸಿಡಿಸಿ ಔಟಾದರು. 18 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಅಂಬಾಟಿ ರಾಯುಡು ಹಾಗೂ ವಿಜಯ್ ಶಂಕರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿಜಯ್ ಶಂಕರ್ 45 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಈ ಜೋಡಿ 98 ರನ್ ಜೊತೆಯಾಟ ನೀಡಿತು.

ಇದನ್ನೂ ಓದಿ: ಐಪಿಎಲ್ ತಂಡದ ಆಟಗಾರರ ಒಟ್ಟು ವೇತನ-ಯಾವ ತಂಡಕ್ಕೆ ಮೊದಲ ಸ್ಥಾನ?

ಕೇದಾರ್ ಜಾಧವ್ ಜೊತೆ ಇನ್ನಿಂಗ್ಸ್ ಕಟ್ಟಿದ ರಾಯುಡು ಅತ್ಯುತ್ತಮ ಪ್ರದರ್ಶನ ನೀಡಿದರು. ರಾಯುಡು 90  ರನ್ ಸಿಡಿಸಿ ಔಟಾದರು. ಇನ್ನು ಕೇದಾರ್ ಜಾಧವ್ 34 ರನ್ ಕಾಣಿಕೆ ನೀಡಿದರು. ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 22 ಎಸೆತದಲ್ಲಿ 45 ರನ್ ಸಿಡಿಸಿದರು. 

ಭುವನೇಶ್ವರ್ ಕುಮಾರ್ 6,  ಮೊಹಮ್ಮದ್ ಶಮಿ ರನೌಟ್ ಆಗೋ ಮೂಲಕ ಭಾರತ 49.5 ಓವರ್‌ಗಳಲ್ಲಿ 252 ರನ್‌ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 4 ಹಾಗೂ ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದು ಮಿಂಚಿದರು.
 

click me!