ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮಕ್ಕಳಾಟ ಭಾರಿ ವೈರಲ್ ಆಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಕ್ರೀಡಾಂಗಣದಲ್ಲಿನ ಮಸ್ತಿ ಹೇಗಿದೆ? ಇಲ್ಲಿದೆ ನೋಡಿ.
ನೇಪಿಯರ್(ಜ.23): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಫನ್ ಮೂಡ್‌ಗೆ ಜಾರಿದರು. ಮೈದಾನದ ಕ್ಯಾಮರಾಮ್ಯಾನ್ ಬಳಸೋ ಸೆಗ್ವೆ ಸೈಕಲ್ ಏರಿ ಸುತ್ತಾಡಿದರು.
ಇದನ್ನೂ ಓದಿ: ಇಂಡೋ-ಕಿವೀಸ್ ಕ್ರಿಕೆಟ್: ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ರೆಸ್ಟ್!
ಮೊದಲು ಎಂ.ಎಸ್.ಧೋನಿ ಸೆಗ್ವೆ ಸೈಕಲ್ ಏರಿ ಮೈದಾನದ ಸುತ್ತ ಒಂದು ರೌಂಡ್ ಹೊಡೆದರು. ಬಳಿಕ ವಿರಾಟ್ ಕೊಹ್ಲಿ ಸುತ್ತಿದರು. ಸೂಪರ್ ಮ್ಯಾನ್ ರೀತಿಯಲ್ಲಿ ಕೊಹ್ಲಿ ಮೈದಾನದಲ್ಲಿ ಸುತ್ತಾಡಿದರು. ಟೀಂ ಇಂಡಿಯಾ ಕ್ರಿಕೆಟಿಗರ ಈ ಆಟ ನೆರದಿದ್ದವರಿಗೂ ನಗು ತರಿಸಿತು.
Post-game shenanigans courtesy &
This looks fun 😁😁😁 pic.twitter.com/0EXXHYh2v7
ಇದನ್ನೂ ಓದಿ: 37 ವರ್ಷದ ಬ್ರೆಂಡೆನ್ ಮೆಕ್ಕಲಂ ಅದ್ಬುತ ಕ್ಯಾಚ್-ವಿಡಿಯೋ ವೈರಲ್!
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗೆಲುವು ಸಾಧಿಸಿತ್ತು. ನ್ಯೂಜಿಲೆಂಡ್ ತಂಡವನ್ನ 157 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ 34.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.