ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಹಾಗೂ ತಾಯಿಯನ್ನ ನಿಂದಿಸಿದ ಪಾಕ್ ನಾಯಕ!

Published : Jan 23, 2019, 05:23 PM IST
ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಹಾಗೂ ತಾಯಿಯನ್ನ ನಿಂದಿಸಿದ ಪಾಕ್ ನಾಯಕ!

ಸಾರಾಂಶ

ಜಂಟ್ಲಮೆನ್ ಗೇಮ್ ಕ್ರಿಕೆಟ್ ಇತ್ತೀಚೆಗೆ ಅರ್ಥ ಕಳೆದುಕೊಳ್ಳುತ್ತಿದೆ ಅನ್ನೋ ಅನುಮಾನ ಕಾಡುತ್ತಿದೆ. ಯುವ ಕ್ರಿಕೆಟಿಗರು ಎಲ್ಲೇ ಮೀರಿ ವರ್ತಿಸುತ್ತಿರುವುದು ಹೆಚ್ಚಾಗುತ್ತಿದೆ. ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಬಳಿಕ ಇದೀಗ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ವಿವಾದ ಹುಟ್ಟುಹಾಕಿದ್ದಾರೆ.

ಡರ್ಬನ್(ಜ.23): ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಅಸಭ್ಯ ಹೇಳಿಕೆಯಿಂದ ಅಮಾನತಾಗಿರುವ ಬೆನ್ನಲ್ಲೇ ಇದೀಗ ಪಾಕಿಸ್ತಾನ ಕ್ರಿಕೆಟಿಗ ನಿಂದನೀಯ ಹೇಳಿಕೆ ಭಾರಿ ವಿವಾದ ಹುಟ್ಟುಹಾಕಿದೆ. ಸೌತ್ಆಫ್ರಿಕಾ ವಿರುದ್ದದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್, ಸೌತ್ಆಫ್ರಿಕಾ ಕ್ರಿಕೆಟಿಗ ಆ್ಯಂಡಿಲ್ ಫೆಕುಲ್‌ವಾಯೊಗೆ ನಿಂದಿಸಿದ್ದಾರೆ.

ಇದನ್ನೂ ಓದಿ: ಬೇಷರತ್‌ ಕ್ಷಮೆಯಾಚಿಸಿದ ಹಾರ್ದಿಕ್‌ ಪಾಂಡ್ಯ, ರಾಹುಲ್‌

ಕ್ರಿಕೆಟಿಗ ಹಾಗೂ ಆತನ ತಾಯಿಯನ್ನ ನಿಂದಿಸಿರುವ ಸರ್ಫಾರಾಜ್ ಅಹಮ್ಮದ್ ಹೇಳಿಕೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಹೇ ಕಪ್ಪು ಹುಡುಗ, ನಿನ್ನ ತಾಯಿ ಎಲ್ಲಿ ಕುಳಿತಿದ್ದಾರೆ? ಎಲ್ಲಿ ಪ್ರಾರ್ಥನೆ ಮಾಡಲು ಹೇಳಿದ್ದಿ? ಎಂದು ಸರ್ಫರಾಜ್ ಹೇಳಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಅಬ್ಬರಕ್ಕೆ ಕಿವೀಸ್ ಧೂಳೀಪಟ-ಸರಣಿ ಶುಭಾರಂಭ

ಸರ್ಫರಾಜ್ ಹೇಳಿಕೆಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಫರಾಜ್ ಕೆಟ್ಟ ಹೇಳಿಕೆಗೆ ಇದೀಗ ಮುಳುವಾಗೋ ಸಾಧ್ಯತೆ ಇದೆ. 

 

 

 

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ ಹಿಂದೆಂದಿಗಿಂತ ದುಬಾರಿ! ಗರಿಷ್ಠ ಟಿಕೆಟ್ ಬೆಲೆ ಕೇವಲ ₹47,000
Royal Challengers Bengaluru: 2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿಗೆ ಸೇರಲಿವೆಯಾ ಏಳು ಮಹಾ ದಾಖಲೆಗಳು