ಕೊಹ್ಲಿ ವಿಕೆಟ್ ಪತನದ ಬಳಿಕ ಸ್ಲೆಡ್ಜಿಂಗ್ ಆರಂಭಿಸಿದ ಇಂಗ್ಲೆಂಡ್

By Web DeskFirst Published Aug 4, 2018, 4:44 PM IST
Highlights

ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿ ಇರೋವರೆಗೂ ಸುಮ್ಮನಿದ್ದ ಇಂಗ್ಲೆಂಡ್ ತಂಡ, ಇದೀಗ ಸ್ಲೆಡ್ಜಿಂಗ್ ಆರಂಭಿಸಿದೆ. ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ವಿರುದ್ಧ ಆಂಗ್ಲರು  ಮಾತಿನ ಚಕಮಕಿ ಕೂಡ ನಡೆಸಿದ್ದಾರೆ. ಇಲ್ಲಿದೆ ಡಿಟೇಲ್ಸ್.

ಎಡ್ಜ್‌ಬಾಸ್ಟನ್(ಆ.04): ಭಾರತ ಹಾಗೂ ಇಂಗ್ಲೆಂಡ್  ನಡುವಿನ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶ ಇನ್ನೂ ನಿಗೂಢವಾಗಿದೆ. 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಭಾರತದ ಮೇಲೆ ಇಂಗ್ಲೆಂಡ್ ತಂಡ ಸ್ಲೆಡ್ಜಿಂಗ್ ಶುರು ಮಾಡಿದೆ.

ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ ಇಂಗ್ಲೆಂಡ್ ಇದೀಗ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಕೊಹ್ಲಿ ವಿಕೆಟ್ ಪತನದ ಬಳಿಕ ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಗೆಲುವಿಗಾಗಿ 194 ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ 3ನೇ ದಿನದಾಟದ ಅಂತ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 110 ರನ್ ಸಿಡಿಸಿತ್ತು.  4ನೇ ದಿನದಾಟ ಆರಂಭದಲ್ಲೇ ಟೀಂ ಇಂಡಿಯಾ ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಿತು. ಬಳಿಕ ಕೊಹ್ಲಿ 51 ರನ್ ಸಿಡಿಸಿ ಔಟಾದರು. ಕೊಹ್ಲಿ ಬೆನ್ನಲ್ಲೇ ಮೊಹಮ್ಮದ್ ಶಮಿ ಕೂಡ ಪೆವಿಲಿಯನ್ ಸೇರಿಕೊಂಡರು. ಸದ್ಯ ಭಾರತ 8 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿದೆ. ಈ ಮೂಲಕ ಗೆಲುವಿಗೆ ಇನ್ನು 42 ರನ್‌ಗಳ ಅವಶ್ಯಕತೆ ಇದೆ.

click me!