
ನವದೆಹಲಿ[ಆ.04]: ಸ್ಲೆಡ್ಜಿಂಗ್ ವಿಚಾರದಲ್ಲಿ ಕೊಹ್ಲಿ ಹಾಗೂ ಬ್ರಿಯಾನ್ ಲಾರಾ ಇಬ್ಬರೂ ಒಂದೇ. ಅವರನ್ನು ಕೆಣಕಿದಷ್ಟು ಕಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಗ್ರಾಥ್ ಹೇಳಿದ್ದಾರೆ.
‘ವಿರಾಟ್ ಹಾಗೂ ಲಾರಾ ನಡುವೆ ಸಾಮ್ಯತೆ ಇದೆ. ಅವರನ್ನು ಸ್ಲೆಡ್ಜ್ ಮಾಡುವಾಗ ಎಚ್ಚರದಿಂದಿರಬೇಕು. ಉತ್ತಮ ಮನಸ್ಥಿತಿಯಲ್ಲಿದ್ದಾಗ ಕೆಣಕಿದರೆ, ಅದರಿಂದಲೇ ಉತ್ತೇಜನಗೊಂಡು ಖಂಡಿತವಾಗಿಯೂ ಶತಕ ಬಾರಿಸುತ್ತಾರೆ’ ಎಂದು ಮೆಗ್ರಾಥ್ ಹೇಳಿದ್ದಾರೆ.
ಎಡ್ಜ್’ಬಾಸ್ಟನ್ ಶತಕ ವೃತ್ತಿಬದುಕಿನ ಶ್ರೇಷ್ಠವಲ್ಲ
ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಸಂಭ್ರಮಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಆ ಶತಕ ತಮ್ಮ ವೃತ್ತಿಬದುಕಿನ ಶ್ರೇಷ್ಠ ಶತಕವೇನಲ್ಲ ಎಂದಿದ್ದಾರೆ.
2ನೇ ದಿನದಾಟದ ಬಳಿಕ ಮಾತನಾಡಿದ ಕೊಹ್ಲಿ, ‘ಈ ಶತಕಕ್ಕೆ 2ನೇ ಸ್ಥಾನ ನೀಡುತ್ತೇನೆ. 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅಡಿಲೇಡ್‌ನಲ್ಲಿ ಬಾರಿಸಿದ 141 ರನ್‌ಗಳ ಇನ್ನಿಂಗ್ಸ್ ನನ್ನ ಟೆಸ್ಟ್ ವೃತ್ತಿಬದುಕಿನ ಶ್ರೇಷ್ಠ ಶತಕವಾಗಿ ಉಳಿದಿದೆ’ ಎಂದರು. ‘ನನ್ನ ಗುರಿ ಏನು ಎನ್ನುವುದು ನನಗೆ ಸ್ಪಷ್ಟವಾಗಿ ತಿಳಿದಿತ್ತು. ಹೀಗಾಗಿ ಇಂಗ್ಲೆಂಡ್ ಬೌಲರ್‌ಗಳನ್ನು ಎದುರಿಸಲು ಸುಲಭವಾಯಿತು. ಸ್ಪಷ್ಟತೆ ಇದ್ದಾಗ ಬ್ಯಾಟ್ ಮಾಡುವುದೇ ಸೊಗಸು’ ಎಂದು ಕೊಹ್ಲಿ ತಮ್ಮ ಇನ್ನಿಂಗ್ಸ್ ಬಗ್ಗೆ ವಿವರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.