ಸಿಡ್ನಿ ಟೆಸ್ಟ್: ಸರಣಿಯಲ್ಲಿ ಮೊದಲ ಬಾರಿಗೆ ಆಸಿಸ್ ದಿಟ್ಟ ಹೋರಾಟ!

By Web DeskFirst Published Jan 5, 2019, 7:37 AM IST
Highlights

ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡೋ ಸೂಚನೆ ನೀಡಿದೆ. ಮಾರ್ಕಸ್ ಹ್ಯಾರಿಸ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಸರಣಿ ಉಳಿಸಲು ಹೋರಾಟ ಮಾಡುತ್ತಿದೆ. 

ಸಿಡ್ನಿ(ಜ.05): ಭಾರತ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆಸ್ಟ್ರೇಲಿಯಾ ಇದೀಗ ಇದೇ ಮೊದಲ ಬಾರಿಗೆ ದಿಟ್ಟ ಹೋರಾಟ ನೀಡಿದೆ. ಸಿಡ್ನಿ ಟೆಸ್ಟ್ ಪಂದ್ಯದ 3ನೇ ದಿನ ಮೊದಲ ಇನ್ನಿಂಗ್ಸ್ ಮುಂದುವರಿಸಿರುವ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 122 ರನ್ ಸಿಡಿಸಿದೆ.

ಇದನ್ನೂ ಓದಿ: ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್!

2ನೇ ದಿನ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 622 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 22 ರನ್ ಸಿಡಿಸಿತು. 3ನೇ ದಿನದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ ಉಸ್ಮಾನ್ ಖವಾಜ 27 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: I Love You So Much'- ವಿಶೇಷ ವ್ಯಕ್ತಿಗೆ ಶತಕ ಅರ್ಪಿಸಿದ ಪಂತ್..!

ಮಾರ್ಕಸ್ ಹ್ಯಾರಿಸ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನೂರರ ಗಡಿ ದಾಟಿತು. ಲಂಚ್ ವೇಳೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 122 ರನ್ ಸಿಡಿಸಿದೆ. ಆಸ್ಟ್ರೇಲಿಯಾ ಇನ್ನೂ 500 ರನ್‌ ಹಿನ್ನಡೆಯಲ್ಲಿದೆ. ಮಾರ್ಕಸ್ ಹ್ಯಾರಿಸ್ ಅಜೇಯ 77 ಹಾಗೂ ಮಾರ್ಕಸ್ ಲಬ್ಸ್‌ಶ್ಯಾಗ್ನೆ ಅಜೇಯ 18 ರನ್ ಸಿಡಿಸಿದ್ದಾರೆ. ಭಾರತ ಪರ ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದ್ದಾರೆ.

click me!