ಏಕದಿನದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಐವರು ಕ್ರಿಕೆಟಿಗರು!

By Web DeskFirst Published Jan 4, 2019, 7:40 PM IST
Highlights

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದರೆ, ಗರಿಷ್ಠ ಬಾರಿ ಶೂನ್ಯ ಸುತ್ತಿದ ದಾಖಲೆ ಯಾರ ಹೆಸರಲ್ಲಿದೆ. ಇಲ್ಲಿದೆ ಸೊನ್ನೆಗೆ ಔಟಾದ ಟಾಪ್ 5 ಕ್ರಿಕೆಟಿಗರ ವಿವರ.
 

ಬೆಂಗಳೂರು(ಜ.04): ಕ್ರಿಕೆಟ್‌ನಲ್ಲಿ ಪ್ರತಿ ದಿನ ಒಂದಲ್ಲಾ ಒಂದು ದಾಖಲೆ ನಿರ್ಮಾಣವಾಗುತ್ತೆ. ಹಲವು ದಾಖಲೆಗಳು ಪುಡಿ ಪುಡಿಯಾಗುತ್ತೆ. ಕೆಲವೊಮ್ಮೆ ಅಪಖ್ಯಾತಿಗೂ ಪಾತ್ರರಾಗುತ್ತಾರೆ. ಹೀಗೆ ಏಕದಿನ ಕ್ರಿಕೆಟ್‌ನಲ್ಲಿ ದಿಗ್ಗಜ ಕ್ರಿಕೆಟಿಗರು ಶೂನ್ಯಕ್ಕೆ ಔಟಾಗೋ ಮೂಲಕ ಕೆಲ ಅಪಖ್ಯಾತಿಗೆ ಪಾತ್ರರಾಗಿದ್ದಾರೆ

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಬಾರಿ ಡಕೌಟ್ ಆಗೋ ಮೂಲಕ ನಿರಾಸೆ ಅನುಭವಿಸಿದ್ದಾರೆ. ಹೀಗೆ ಏಕದಿನದಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಐವರು ಕ್ರಿಕೆಟಿಗರ ವಿವರ ಇಲ್ಲಿದೆ.

ಇದನ್ನೂ ಓದಿ: ಸಿಡ್ನಿ ಟೆಸ್ಟ್‌ನಲ್ಲಿ ಶತಕದ ಅಬ್ಬರ - ಪಂತ್ ಈಗ ದಾಖಲೆಗಳ ಸರದಾರ!

1 ಸನತ್ ಜಯಸೂರ್ಯ
ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಏಕದಿನ ಕ್ರಿಕೆಟ್‌ನಲ್ಲಿ 13,000 ರನ್ ಸಿಡಿಸಿದ್ದಾರೆ. ಇನ್ನು 323 ವಿಕೆಟ್ ಕಬಳಿಸಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸೋ ಕೊಡೋ ಸಾಮರ್ಥ್ಯ ಹೊಂದಿದ್ದ ಜಯಸೂರ್ಯ, ಗರಿಷ್ಠ ಬಾರಿ ಶೂನ್ಯ ಸುತ್ತಿದ ಅಪಖ್ಯಾತಿಗೆ ಪಾತ್ರರಾಗಿದ್ದಾರೆ. ಜಯಸೂರ್ಯ ಏಕದಿನ ಕ್ರಿಕೆಟ್‌ನಲ್ಲಿ 34 ಬಾರಿ ಸೊನ್ನೆ ಸುತ್ತಿದ್ದಾರೆ.

2 ಶಾಹಿದ್ ಆಫ್ರಿದಿ
ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ, ಏಕದಿನ ಕ್ರಿಕೆಟ್‌ನಲ್ಲಿ 8000 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ 395 ವಿಕೆಟ್ ಕಬಳಿಸಿದ್ದಾರೆ. ಸಿಕ್ಸರ್ ಮೂಲಕವೇ ರನ್ ಗಳಿಸುತ್ತಿದ್ದ ಅಫ್ರಿದಿ 30 ಬಾರಿ ಸೊನ್ನೆಗೆ ಔಟಾಗಿದ್ದಾರೆ.

ಇದನ್ನೂ ಓದಿ:ಸಿಡ್ನಿ ಟೆಸ್ಟ್: ಎರಡನೇ ದಿನ ಭಾರತದ್ದೇ ದರ್ಬಾರ್

3 ವಾಸಿಮ್ ಅಕ್ರಮ್
ಪಾಕಿಸ್ತಾನ ಮಾಜಿ ನಾಯಕ,  ಸ್ವಿಂಗ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ವಾಸಿಮ್ ಅಕ್ರಮ್ ಏಕದಿನದಲ್ಲಿ 502 ವಿಕೆಟ್ ಕಬಳಿಸಿದ್ದಾರೆ. ಅಕ್ರಮ್ ದಿಗ್ಗಜ ವೇಗಿ ಅನ್ನೋದರಲ್ಲಿ ಎರಡು ಮಾತಿಲ್ಲ. ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಅಕ್ರಮ್ 4000 ರನ್ ಸಿಡಿಸಿದ್ದಾರೆ. ಆದರೆ 28 ಬಾರಿ ಡಕೌಟ್ ಆಗಿದ್ದಾರೆ.

4 ಮಹೇಲಾ ಜಯವರ್ದನೆ
ಶ್ರೀಲಂಕಾ ಮಾಜಿ ನಾಯಕ, ಶ್ರೇಷ್ಠ ಬ್ಯಾಟ್ಸ್‌ಮನ್ ಮಹೇಲಾ ಜಯವರ್ದನೆ ಏಕದಿನದಲ್ಲಿ 19 ಶತಕ ಸಿಡಿಸಿದ್ದಾರೆ. ಇಷ್ಟೇ ಅಲ್ಲ 12000 ರನ್ ಕಲೆಹಾಕಿದ್ದಾರೆ. ಜಯವರ್ಧನೆ 28 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಇದನ್ನೂ ಓದಿ: ಮಾತಿನ ಚಕಮಕಿ ಬಳಿಕ ಸರ್ಪ್ರೈಸ್ ನೀಡಿದ ರಿಷಬ್ ಪಂತ್!

5 ಮುತ್ತಯ್ಯ ಮುರಳೀಧರನ್
ಲಂಕಾ ಸ್ಪಿನ್ ದಿಗ್ಗಜ ಮುತ್ತಯ್ಯ ಮರಳೀಧರನ್ ಏಕದಿನದಲ್ಲಿ 534 ವಿಕೆಟ್ ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಕಬಳಿಸೋ ಮೂಲಕ ಗರಿಷ್ಠ ವಿಕೆಟ್ ಪಡೆದ ಕ್ರಿಕೆಟಿಗರಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಮುರಳೀಧರನ್ 25 ಬಾರಿ ಸೊನ್ನೆ ಸುತ್ತಿದ್ದಾರೆ.
 

click me!