ಮೆಲ್ಬೋರ್ನ್ ಟೆಸ್ಟ್: ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಸೈನ್ಯಕ್ಕೆ ಹಿನ್ನಡೆ!

By Web Desk  |  First Published Dec 23, 2018, 10:04 AM IST

ಪರ್ತ್ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಕೊರತೆ ಎದುರಿಸಿದ ಟೀಂ ಇಂಡಿಯಾ ಇದೀಗ ಮೆಲ್ಬೋರ್ನ್ ಪಂದ್ಯದಲ್ಲೂ ಅದೇ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಇಂಜುರಿ ಪಟ್ಟಿ ಬೆಳೆಯುತ್ತಿದೆ.
 


ಮೆಲ್ಬೋರ್ನ್(ಡಿ.23): ಆಸ್ಟ್ರೇಲಿಯಾ ವಿರುದ್ದದ 3ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಇದೀಗ ಸ್ಪಿನ್ ಸಂಕಷ್ಟ ಎದುರಾಗಿದೆ. ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಇಂಜುರಿಯಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಬಾಲ್ ಟ್ಯಾಂಪರ್ ಬಳಿಕ ಯೋಗ ಶಿಕ್ಷಕನಾಗಲು ಬಯಸಿದ್ದೆ-ಬ್ಯಾನ್‌ಕ್ರಾಫ್ಟ್ !

Latest Videos

undefined

ಇಂಜುರಿ ಕಾರಣದಿಂದ ದ್ವಿತೀಯ ಟೆಸ್ಟ್ ಪಂದ್ಯದಿಂದ ಆರ್ ಅಶ್ವಿನ್ ಹೊರಗುಳಿದಿದ್ದರು. ಪರ್ತ್ ಪಿಚ್ ಲಾಭ ಪಡೆದುಕೊಂಡ ಆಸ್ಟ್ರೇಲಿಯಾ ಸ್ಪಿನ್ನರ್ ನಥನ್ ಲಿಯೋನ್ ಟೀಂ ಇಂಡಿಯಾಗೆ ಸೋಲುಣಿಸಿದ್ದರು. ಇದೀಗ 3ನೇ ಟೆಸ್ಟ್ ಪಂದ್ಯದಿಂದಲೂ ಅಶ್ವಿನ್ ಹೊರಗುಳಿದರೆ ಟೀಂ ಇಂಡಿಯಾ ಸಂಕಷ್ಟ ತಪ್ಪಿದ್ದಲ್ಲ. 

ಇದನ್ನೂ ಓದಿ: ತಂದೆ ನಿರ್ಮಿಸಿದ ಮೈದಾನದಲ್ಲಿ ಅಭ್ಯಾಸ-ಟೀಂ ಇಂಡಿಯಾದಲ್ಲಿ ಸ್ಥಾನ!

ಮುಂದಿನ 48 ಗಂಟೆಗಳಲ್ಲಿ ಅಶ್ವಿನ್ ಲಭ್ಯತೆ ಸ್ಪಷ್ಟವಾಗಲಿದೆ. ಹೀಗಾಗಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತ ಪ್ರದರ್ಶನ ನೀಡಬೇಕು. ಇಷ್ಟೇ ಅಲ್ಲ ನಾಯಕ ವಿರಾಟ್ ಕೊಹ್ಲಿ ಮೇಲಿನ ಒತ್ತಡ  ಕಡಿಮೆ ಮಾಡಬೇಕು ಎಂದು ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.   ಇನ್ನು ರವೀಂದ್ರ ಜಡೇಜಾ ಕೂಡ ಇಂಜುರಿಗೆ ತುತ್ತಾಗಿದ್ದಾರೆ. ಆದರೆ  ಮೆಲ್ಬೋರ್ನ್ ಟೆಸ್ಟ್ ಪಂದ್ಯದ ವೇಳೆ ಚೇತರಿಸಿಕೊಳ್ಳೋ ಸಾಧ್ಯತೆ ಇದೆ. 
ಇದನ್ನೂ ಓದಿ: ಬಹುಕಾಲದ ಗೆಳತಿಯನ್ನು ವರಿಸಿದ ಸಂಜು ಸ್ಯಾಮ್ಸನ್

click me!