ಬಾಲ್ ಟ್ಯಾಂಪರ್ ಬಳಿಕ ಯೋಗ ಶಿಕ್ಷಕನಾಗಲು ಬಯಸಿದ್ದೆ-ಬ್ಯಾನ್‌ಕ್ರಾಫ್ಟ್ !

By Web Desk  |  First Published Dec 23, 2018, 9:49 AM IST

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾದ ಮೇಲೆ ಅನುಭವಿಸಿದ ನೋವು ಹೇಳತೀರದು. ಒಂದು ಕ್ಷಣ ಕ್ರಿಕೆಟ್‌ನಿಂದ ದೂರ ಸರಿದು ಯೋಗ ಶಿಕ್ಷಕನಾಗಲು ಬಯಸಿದ್ದೆ ಎಂದು ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಹೇಳಿದ್ದಾರೆ.


ಸಿಡ್ನಿ(ಡಿ.23): ಬಾಲ್‌ ಟ್ಯಾಂಪರಿಂಗ್‌ ಪ್ರಕರಣದಿಂದ ನಿಷೇಧಕ್ಕೊಳಗಾದ ಬಳಿಕ ಕ್ರಿಕೆಟ್‌ ಬಿಟ್ಟು ಯೋಗಾ ಶಿಕ್ಷಕನಾಗಲು ಬಯಸಿದ್ದೆ ಎಂದು ಆಸ್ಪ್ರೇಲಿಯಾದ ಕಳಂಕಿತ ಕ್ರಿಕೆಟಿಗ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್‌ ಹೇಳಿದ್ದಾರೆ. ಶುಕ್ರವಾರ ಸ್ಮಿತ್‌ ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕ ಜೀವನಕ್ಕೆ ಮರಳಿದ ಬೆನ್ನಲ್ಲೇ ಬ್ಯಾನ್‌ಕ್ರಾಫ್ಟ್‌ ಕೂಡ ಮೌನ ಮುರಿದಿದ್ದಾರೆ. 

ಅಲ್ಲದೆ ಪಶ್ಚಿಮ ಆಸ್ಪ್ರೇಲಿಯಾದ ಪತ್ರಿಕೆಯೊಂದರಲ್ಲಿ, ಲೇಖನವೊಂದನ್ನು ಬರೆದಿದ್ದಾರೆ.  ಡಿ.30ಕ್ಕೆ ನಿಷೇಧ ಅವಧಿ ಮುಕ್ತಾಯಗೊಳ್ಳಲಿದ್ದು, ಬ್ಯಾನ್‌ಕ್ರಾಫ್ಟ್‌ ಬಿಗ್‌ಬ್ಯಾಶ್‌ ಲೀಗ್‌ ಮೂಲಕ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಕಳೆದ 9 ತಿಂಗಳಿನಿಂದ  ಬ್ಯಾನ್ ಕ್ರಾಫ್ಟ್ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ.

Tap to resize

Latest Videos

ಸೌತ್ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಬ್ಯಾನ್‌ಕ್ರಾಫ್ಟ್‌ ಬಾಲ್ ಟ್ಯಾಂಪರಿಂಗ್ ನಡೆಸಿದ್ದರು. ಆರೋಪ ಸಾಬೀತಾಗುತ್ತಿದ್ದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಸ್ಮಿತ್ ಹಾಗೂ ವಾರ್ನರ್‌ಗೆ 1 ವರ್ಷ ಹಾಗೂ ಬೆನ್‌ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಶಿಕ್ಷೆ ವಿಧಿಸಿತು. 

click me!