ಇಂಡೋ-ಆಸಿಸ್ ಟಿ20: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

By Web DeskFirst Published Nov 21, 2018, 12:59 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಟೀಂ ಇಂಡಿಯಾ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ತಂಡದಲ್ಲಿ ಯಾರು ಇನ್? ಯಾರು ಔಟ್? ಇಲ್ಲಿದೆ ವಿವರ.

ಬ್ರಿಸ್ಬೇನ್(ನ.21): ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿದೆ. 12 ಮಂದಿ ಸದಸ್ಯರ ತಂಡದಲ್ಲಿ ಯಜುವೇಂದ್ರ ಚೆಹಾಲ್‌ರನ್ನ ಕೈಬಿಟ್ಟಿದೆ.  

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕ್ರುನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹಮ್ಮದ್, ಯಜುವೇಂದ್ರ ಚಹಾಲ್

ಆಸ್ಟ್ರೇಲಿಯಾ ತಂಡ:
ಆರೋನ್ ಫಿಂಚ್(ನಾಯಕ), ಡಾರ್ಕಿ ಶಾರ್ಟ್, ಕ್ರಿಸ್ ಲಿನ್, ಗ್ಲೆನ್ ಮಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಬೆನ್ ಮೆಕ್‌ಡೆಮೊರ್ಟ್, ಆಲೆಕ್ಸ್ ಕ್ಯಾರಿ, ಆಂಡ್ರ್ಯೂ ಟೈ, ಆಡಮ್ ಜಂಪಾ, ಜಾಸನ್ ಬೆಹ್ರೆನ್‌ಡ್ರೋಫ್, ಬಿಲ್ಲಿ ಸ್ಟಾನ್‌ಲೇಕ್

 

We are off to The Gabba 😎💪🏻 pic.twitter.com/RF9ReN2mx3

— BCCI (@BCCI)

 

ಆಸ್ಟ್ರೇಲಿಯಾ ವಿರುದ್ಧ ಭಾರತ 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಸರಣಿ ಆಡಲಿದೆ. ನವೆಂಬರ್ 21 ರಿಂದ 2019, ಜನವರಿ 18ರ ವರೆಗೆ ನಡೆಯಲಿದೆ. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧದಿಂದ ಆಸ್ಟ್ರೇಲಿಯಾ ಇತ್ತೀಚೆಗೆ ಹಿನ್ನಡೆ ಅನುಭವಿಸಿದೆ. ಹೀಗಾಗಿ ಈ ಪ್ರವಾಸ ಟೀಂ ಇಂಡಿಯಾ ಪಾಲಿಗೆ ಅತ್ಯುತ್ತಮ ಅವಕಾಶವಾಗಿದೆ.

click me!